ಹೊಸಮಠ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ಆರೋಪ
ಕಡಬ, ಜೂ.26. ಹೊಸಮಠ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವರಾಮ್ ಕಳೆದ ಒಂದು ತಿಂಗಳಿನಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದು ಈ ಬಗ್ಗೆ ಸಂಘದ ಸದಸ್ಯರಿಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಟಿ.ಎಮ್ ಮ್ಯಾಥ್ಯೂ ಹೇಳಿದ್ದಾರೆ.
ಕಡಬದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ್ ಬಗ್ಗೆ ವಿಚಾರಿಸಿದರೆ ಕಚೇರಿ ಸಿಬ್ಬಂದಿ ಗೈರುಹಾಜರಾಗಿದ್ದಾರೆ ಎನ್ನುತ್ತಾರೆ. ಆದರೆ ಸಂಘದ ನಿರ್ದೆಶಕರು ಅಮಾನತು ಮಾಡಲಾಗಿದೆ ಎನ್ನುವ ಗೊಂದಲಮಯ ಉತ್ತರ ನೀಡುತ್ತಾರೆ. ಸಂಘದಲ್ಲಿ ಲಕ್ಷಾಂತರ ರೂ. ಅವ್ಯಹಾರ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಂಕ್‌ನಲ್ಲಿ ಈ ರೀತಿಯ ಅನುಮಾನ ವ್ಯಕ್ತವಾಗಿರುವುದರಿಂದ ಸಹಕಾರಿ ಸಂಘಗಳ ಕಾನೂನಿನಡಿಯಲ್ಲಿ ಆಡಳಿತ ಮಂಡಳಿ ಸಂಘದ ಸದಸ್ಯರ ತುರ್ತು ಮಹಾಸಭೆಯನ್ನು ನಡೆಸಿ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಟ್ರುಪ್ಪಾಡಿ ಗ್ರಾಪಂ ಮಾಜಿ ಸದಸ್ಯ ಕ್ಸೇವಿಯರ್ ಬೇಬಿ, ಸಂಘದ ಮಾಜಿ ಅಧ್ಯಕ್ಷ ಸುಬ್ರಾಯ ಹೆಬ್ಬಾರ್, ಮಾಜಿ ಉಪಾಧ್ಯಕ್ಷ ಪುರುಷೋತ್ತಮ ಗೌಡ ಪನ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.