ವಿದ್ಯಾರ್ಥಿ ಮಂತ್ರಿಮಂಡಲ ಸಭೆ
Update: 2016-06-26 23:54 IST
ಮಂಗಳೂರು, ಜೂ.26: ನಗರದ ಬೆಂದೂರು ಸೈಂಟ್ ಆ್ಯಗ್ನೆಸ್ ಪದವಿ ಪೂರ್ವ ಕಾಲೇಜಿನ 2016-17ನೆ ಸಾಲಿನ ಮಂತ್ರಿಮಂಡಲವನ್ನು ಸಂಸ್ಥೆಯ ಸಹ ಕಾರ್ಯದರ್ಶಿ ಭಗಿನಿ ಡಾ.ಮರಿಯ ರೂಪಾ ಎ.ಸಿ. ಉದ್ಘಾಟಿಸಿದರು. ಪ್ರಾಂಶುಪಾಲೆ ಭಗಿನಿ ಶಮಿತಾ ಎ.ಸಿ. ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ವಿದ್ಯಾರ್ಥಿ ನಾಯಕಿ ನೆರಿಸ್ಸಾ ನೊರೋನ್ಹ, ಉಪನಾಯಕಿ ರಿಯಾ ಬೆನ್ನಿ ಮತ್ತಿತರರು ಉಪಸ್ಥಿತರಿದ್ದರು. ಮೆರುಲ್ಲಾ ಪಿಂಟೊ ನಿರೂಪಿಸಿದರು.