×
Ad

ಅಜ್ಜರಕಾಡು ಶಾಲೆಯಲ್ಲಿ ವನಮಹೋತ್ಸವ

Update: 2016-06-27 00:03 IST

ಉಡುಪಿ, ಜೂ.26: ಜಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸಹೇಲಿ ಇದರ ವತಿಯಿಂದ ಜಂಟ್ಸ್ ಇಂಟರ್‌ನ್ಯಾಶನಲ್‌ನ ವರ್ಲ್ಡ್ ಚೇರ್‌ಮೆನ್ ನಾನಾ ಚುಡಾಸಮರ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಜಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ಜಂಟ್ಸ್ ಫೆಡರೇಶನ್ ಉಪಾಧ್ಯಕ್ಷ ತೇಜೇಶ್ವರ್ ರಾವ್, ಯುನಿಟ್ ನಿರ್ದೇಶಕ ದೇವದಾಸ್ ಕಾಮತ್, ಎವರ್‌ಗ್ರೀನ್ ಸಹೇಲಿ ಅಧ್ಯಕ್ಷೆ ಸರಿತಾ ಡಿಸೋಜ, ಕಾರ್ಯದರ್ಶಿ ಕೀರ್ತನಾ, ಗ್ರೂಪ್ ಸದಸ್ಯರಾದ ಶೈಲಾ ಮೈಯಾ, ಗಾಯತ್ರಿ ದತ್ತ್, ಮಾನಸಾ ಪೈ, ಸಂಧ್ಯಾರಾವ್, ಎಲ್ವಿನಾ ಲೂಯಿಸ್, ಶಾಲಾ ಮಖ್ಯಶಿಕ್ಷಕಿ ನಾಗರತ್ನ್ನಾ, ಶಿಕ್ಷಕಿ ಪ್ರತಿಮಾ, ದೈಹಿಕ ಶಿಕ್ಷಕ ಸೋಮಪ್ಪತಿಂಗಳಾಯ ಉಪಸ್ಥಿತರಿದ್ದರು.
ವಿಶ್ವಕರ್ಮ ಒಕ್ಕೂಟದಿಂದ ನೇಪಾಳ ಮಾಜಿ ಪ್ರಧಾನಿ ಭೇಟಿ ಉಡುಪಿ, ಜೂ.26: ಉಡುಪಿ ದ.ಕ. ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯರ ನೇತೃತ್ವದಲ್ಲಿ ಕಾರ್ಯಕಾರಿಣಿ ಸದಸ್ಯರು ಹಾಗೂ ಇತರ ಸಮಾನ ಮನಸ್ಕರು ಇತ್ತೀಚೆಗೆ ಸಿಕ್ಕಿಂ ರಾಜ್ಯವನ್ನು ಸಂದರ್ಶಿಸಿದ ಸಂದರ್ಭ ದಕ್ಷಿಣ ಸಿಕ್ಕಿಂ ಜಿಲ್ಲೆಯ ನಾಮ್ಚಿಯ ಗುರು ಪದ್ಮನಾಭ ಮಂದಿರದಲ್ಲಿ ನೇಪಾಳದ ಮಾಜಿ ಪ್ರಧಾನಿ ಮಾಧವ ಕೆ.ನೇಪಾಳ್‌ರನ್ನು ಭೇಟಿಯಾದರು. ಮಾಜಿ ಪ್ರಧಾನಿ ನೇಪಾಳದ ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕರು, ಉಡುಪಿ-ಬಾರಕೂರಿನವರೆಂದು ಜ್ಞಾಪಿಸಿಕೊಂಡರು. ಅಲ್ಲದೆ ವಿಶ್ವಕರ್ಮ ಒಕ್ಕೂಟದ ನಿಯೋಗ ನೇಪಾಳ ದೇಶಕ್ಕೆ ಬರುವಂತೆ ಅವರು ಆಮಂತ್ರಿಸಿದರು. ಒಕ್ಕೂಟದ ತಂಡದಲ್ಲಿ ಬಿ.ಜಿ.ರಮೇಶ್ ಆಚಾರ್ಯ, ಶಿಲ್ಪಿ ಗಣಪತಿ ಆಚಾರ್ಯ, ದಿನೇಶ್ ಆಚಾರ್ಯ ಚೇಂಪಿ, ಚಂದ್ರಶೇಖರ ಆಚಾರ್ಯ ಕೆಮ್ಮಣ್ಣು, ಬಿ.ಎ. ಆಚಾರ್ಯ ಮಣಿಪಾಲ, ಜಯರಾಮ ಆಚಾರ್ಯ ಸಾಲಿಗ್ರಾಮ, ಉಮೇಶ ಆಚಾರ್ಯ ಬಾರಕೂರು, ಶ್ರೀಧರ ಆಚಾರ್ಯ ಬಂಡಿಮಠ, ರಾಘವೇಂದ್ರ ಆಚಾರ್ಯ ಸಾಯ್ಬರಕಟ್ಟೆ, ಮುರಹರಿ ಆಚಾರ್ಯ ಉಡುಪಿ, ಸುಬ್ರಹ್ಮಣ್ಯ ಆಚಾರ್ಯ ಬಾಳ್ಕುದ್ರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News