ಸಕ್ಷಮ ಪ್ರಾಧಿಕಾರಿ ಅಧಿಕಾರ ಸ್ವೀಕಾರ
Update: 2016-06-27 00:05 IST
ಮಂಗಳೂರು, ಜೂ.26: ಕಾರ್ಕಳ, ಮೂಡುಬಿದಿರೆ, ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 (13)ರ ರಸ್ತೆ ವಿಸ್ತರಣೆಯ ಭೂಸ್ವಾಧೀನತೆಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಯಾಗಿ ಗಾಯತ್ರಿ ಎನ್. ನಾಯಕ್ ಜೂ.22ರಂದು ಅಧಿಕಾರ ವಹಿಸಿ ಕೊಂಡಿದ್ದಾರೆ. ರಾ.ಹೆ. 66 ನಂತೂರು ತಲಪಾಡಿ ಮತ್ತು ಸುರತ್ಕಲ್, ಮುಲ್ಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಸಕ್ಷಮ ಪ್ರಾಧಿಕಾರಿಯವರ ಪ್ರಭಾರವನ್ನು ಕೂಡಾ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಅವರು ವಹಿಸಿಕೊಂಡಿ ದ್ದಾರೆ ಎಂದು ಪ್ರಕಟನೆ ತಿಳಿಸಿದೆ.