ಜನಸಾಮಾನ್ಯರ ಆಶೋತ್ತರಗಳಿಗೆ ಬದ್ಧ: ಪ್ರಮೋದ್
ಉಡುಪಿ, ಜೂ.26: ರಾಜ್ಯ ಸರಕಾರ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಲು ಸದಾ ಬದ್ಧನಾಗಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ, ಭಕ್ತವೃಂದ, ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕೊಡವೂರು ದೇವಸ್ಥಾನದಲ್ಲಿ ರವಿವಾರ ಆಯೋಜಿಸಲಾದ ಹುಟ್ಟೂರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಚಿವರನ್ನು ಕೊಡವೂರಿನ ಹಿರಿಯ ಗ್ರಾಮಸ್ಥ ವಾಸು ಬಿ.ಶೆಟ್ಟಿ ಸನ್ಮಾನಿಸಿದರು. ಅಧ್ಯಕ್ಷತೆಯನ್ನು ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ವಹಿಸಿದ್ದರು. ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಶ್ರೀ ಶಂಕರನಾರಾಯಣ ಭಕ್ತವೃಂದದ ಅಧ್ಯಕ್ಷ ರವಿರಾಜ್ ಹೆಗ್ಡೆ, ಸ್ಥಳೀಯ ಮುಖಂಡರಾದ ಸಾಧು ಸಾಲ್ಯಾನ್, ಆನಂದ ಪಿ. ಸುವರ್ಣ, ಕಾಂತಪ್ಪ ಕರ್ಕೇರ, ಅಶೋಕ್ ಕುಮಾರ್ ಕೊಡವೂರು, ನಗರಸಭಾ ಸದಸ್ಯರಾದ ಹಾರ್ಮಿಸ್ ನೋರ್ಹನ, ಜಾನಕಿ ಗಣಪತಿ ಶೆಟ್ಟಿಗಾರ್, ವಿಜಯ್ ಕುಂದರ್, ಗಣೇಶ್ ನೆರ್ಗಿ, ಸುಮ ನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್, ಕೊಡವೂರು ಯುವಕ ಸಂಘದ ಅಧ್ಯಕ್ಷ ರತ್ನಾಕರ್ ಅಮೀನ್, ದಯಾನಂದ ಪಾಲನ್, ಎಂ.ಎಸ್.ಭಟ್, ಗೋಪಾಲ ಕುಂದರ್, ಜನಾದರ್ನ್ ತಿಂಗಳಾಯ, ಚಂದ್ರಕಾಂತ್ ಕಾನಂಗಿ ಉಪಸ್ಥಿತರಿದ್ದರು. ಭಾಸ್ಕರ್ ಭಟ್ ಅಗ್ರಹಾರ ಸ್ವಾಗತಿಸಿದರು. ಸತೀಶ್ ಕೊಡವೂರು ಅಭಿನಂದನಾ ಪತ್ರ ವಾಚಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.