×
Ad

ಸುಂಕದಕಟ್ಟೆ: ಬೈಕ್ ಅಪಘಾತ; ಸವಾರ ಮೃತ್ಯು

Update: 2016-06-27 00:08 IST

ಕಡಬ, ಜೂ.26: ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ಶನಿವಾರದಂದು ಬೈಕ್‌ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಗಾಯಗೊಂಡಿದ್ದ ಸವಾರರೊಬ್ಬರು ಮೃತಪಟ್ಟ ಘಟನೆ ರವಿವಾರ ನಡೆದಿದೆ. ಐತ್ತೂರು ಗ್ರಾಮದ 72 ಕಾಲನಿ ನಿವಾಸಿ ಸದ್ಗುರು(21) ಮಂಗಳೂರಿನ ಫಾದರ್ ಮುಲ್ಲರ್‌ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನೊಂದು ಬೈಕಿನಲ್ಲಿದ್ದ ಹಳೆನೇರಂಕಿ ಗ್ರಾಮದ ಮುಳಿಮಜಲು ನಿವಾಸಿ ಸೂರಪ್ಪ ಗೌಡ ಮತ್ತು ಅವರ ಪುತ್ರ ಶ್ರೀಕಾಂತ್ ಎಂಬವರಿಗೆ ಗಾಯಗಳಾಗಿ, ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News