ಗುರುದ್ವಾರದಲ್ಲಿ ಮೊಳಗಿದ ಅಝಾನ್ : ಸಿಖ್ಖರು-ಮುಸ್ಲಿಮರು ಒಂದಾಗಿ ಮಾಡಿದರು ಇಫ್ತಾರ್

Update: 2016-06-27 05:12 GMT

ಫೈಝಾಬಾದ್, ಜೂ.27: ಜಾತಿ, ಧರ್ಮಗಳ ಹೆಸರಿನಲ್ಲಿ ಅನಗತ್ಯ ಕಚ್ಚಾಟ ನಡೆಯುವ ಇಂದಿನ ದಿನಗಳಲ್ಲಿ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಫೈಝಾಬಾದ್‌ನ ಗುರುದ್ವಾರವೊಂದರಲ್ಲಿ ನಡೆದ ಇಫ್ತಾರ್ ಕೂಟ ಎಲ್ಲರ ಕಣ್ಣು ತೆರೆಸುವಂತಿದೆ.

ಇಲ್ಲಿನ ಖಿಡ್ಕಿ ಅಲಿ ಬೇಗ್ ಪ್ರದೇಶದಲ್ಲಿರುವ ಗುರುದ್ವಾರ ದುಃಖ್ ಹರಣ್‌ನಲ್ಲಿ ಕಳೆದ ಗುರುವಾರ ಅಝಾನ್ ಮೊಳಗಿದಾಗ ನಗರದ ನೂರಾರು ಮುಸ್ಲಿಮರು ಅಲ್ಲಿದ್ದು ಜೊತೆಯಾಗಿ ನಮಾಝ್ ಮಾಡಿದರು.

 ಈ ಸಂದರ್ಭ ಗುರುದ್ವಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು, ಸಿಖ್ಖರು ಹಾಗೂ ಇತರ ಧರ್ಮದವರೂ ಉಪಸ್ಥಿತರಿದ್ದರು. ಎಲ್ಲರೂ ಒಟ್ಟಾಗಿ ಸೇರಿ ಇಫ್ತಾರ್ ಮಾಡಿ ತಾವೆಲ್ಲರೂ ಜಾತಿ, ಧರ್ಮಗಳ ಎಲ್ಲೆ ಮೀರಿದ ಮಾನವತೆಯ ಹರಿಕಾರರು ಎಂಬುದನ್ನು ಸಾಬೀತುಪಡಿಸಿ, ಯಾರೂ ತಮ್ಮ ಏಕತೆಗೆ ಭಂಗ ತರಲು ಸಾಧ್ಯವಿಲ್ಲವೆಂದು ಸಾರಿದರು.

ಈ ಸಂದರ್ಭದಲ್ಲಿ ಗುರುದ್ವಾರದಲ್ಲಿ ನಗರದ ಹಲವು ಗಣ್ಯಾತಿಗಣ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News