×
Ad

ಕಾಂಗ್ರೆಸ್‌ನೊಂದಿಗೆ ಮೈತ್ರಿ ವಿಚಾರ: ಬಂಗಾಳದ ಸಿಪಿಎಂ ಘಟಕಕ್ಕೆ ಕೇರಳ ಘಟಕದಿಂದ ಛೀಮಾರಿ

Update: 2016-06-27 13:02 IST

ತಿರುವನಂತಪುರಂ,ಜೂನ್ 27: ವಿಧಾನಸಭಾಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿಮಾಡಿಕೊಂಡ ಬಂಗಾಳದ ಸಿಪಿಐಎಂ ಘಟಕವನ್ನು ಕೇರಳ ಸಿಪಿಐಎಂ ಘಟಕ ಪರೋಕ್ಷವಾಗಿ ಟೀಕಿಸಿದೆ. ಹೊಸದಿಲ್ಲಿ ಕೊನೆಗೊಂಡ ಕೇಂದ್ರ ಸಮಿತಿಯಲ್ಲಿ ಕೇರಳ ಘಟಕ ಎತ್ತಿದ ವಿಮರ್ಶೆಯ ಮುಂದುವರಿದಭಾಗ ರಾಜ್ಯದಲ್ಲಿ ನಡೆದಿದ್ದು ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯ ಹೆಸರನ್ನು ಬಹಿರಂಗವಾಗಿ ಹೇಳದೆಯೇ ಕೇಂದ್ರ ನಾಯಕರ ಒಂದು ವಿಭಾಗವನ್ನು ಕೇರಳ ರಾಜ್ಯಘಟಕ ತಪ್ಪಿತಸ್ಥರ ಕಟಕಟೆಯಲ್ಲಿ ನಿಲ್ಲಿಸಿದೆ.

   

    ಪೊಲಿಟ್‌ಬ್ಯೂರೊದಲ್ಲಿಮತ್ತು ಕೇಂದ್ರಸಮಿತಿಯಲ್ಲಿಪ್ರಕಾಶ್ ಕಾರಟ್, ಎಸ್. ರಾಮಚಂದ್ರನ್‌ಪಿಳ್ಳೆಯವರ ನೇತೃತ್ವದಲ್ಲಿ ಕೇರಳ ಘಟಕ ಬಂಗಾಳ ಘಟಕ, ಸೀತಾರಾಂ ಯಚೂರಿ ವಿರುದ್ಧ ದಾಳಿ ಮಾಡಿತ್ತು. ಇದರ ಅಲೆ ಇತರ ರಾಜ್ಯಘಟಕಗಳಲ್ಲಿಯೂ ಬಡಿದಪ್ಪಳಿಸಲಿದೆಯೆಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್‌ನೊಂದಿಗಿನ ಮೈತ್ರಿಯ ವಿರುದ್ಧ ಸಿಪಿಐಎಂನೊಳಗೆ ಸೃಷ್ಟಿಯಾದ ಭಿನ್ನಾಭಿಪ್ರಾಯಗಳನ್ನು ಇವೆಲ್ಲವೂ ತೋರಿಸುತ್ತಿವೆ. ಬಿಜೆಪಿ-ಕಾಂಗ್ರೆಸ್‌ಗಳೊಂದಿಗೆ ಸಿಪಿಐಎಂಗೆ ಯಾವುದೇ ರೀತಿಯ ಮೈತ್ರಿ ಇಲ್ಲ ಎಂದು ಪಕ್ಷದ ತೀರ್ಮಾನವಾಗಿದ್ದು ಇದಕ್ಕೆ ವಿರುದ್ಧ ಬಂಗಾಳ ಘಟಕವರ್ತಿಸಿದೆ ಎಂದು ಬಂಗಾಳ ಘಟಕವನ್ನು ಕಟುವಾಗಿ ಟೀಕಿಸಲಾಗುತ್ತಿದೆ. ಅಖಿಲಭಾರತ ಮಟ್ಟದಲ್ಲಿ ಎಡರಂಗ ಕಟ್ಟಲಾಗುವುದು ಎಂದು ಕೇಳಿಸಿಕೊಳ್ಳುತ್ತಿರುವಾಗಲೇ ಬಂಗಾಳದ ಸಿಪಿಐಎಂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಪೊಲಿಟ್‌ಬ್ಯೂರೊದ ಕೆಲವರ ಮೌನ ಸಮ್ಮತಿಯಲ್ಲಿ ಕಾಂಗ್ರೆಸ್‌ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಯಿತು. ಪಕ್ಷ ನೀತಿಯ ಉಲ್ಲಂಘನೆ ನಡೆದರೂ ಪ್ರಧಾನಕಾರ್ಯದರ್ಶಿ ಮಧ್ಯಪ್ರವೇಶಿಸಿಲ್ಲ ಎಂದು ಸೀತಾರಾಂ ಯಚೂರಿಯನ್ನು ಟೀಕಿಸಲಾಗಿದೆ. ಕೇರಳ ಸಹಿತ ಐದು ರಾಜ್ಯಗಳ ಕೇಂದ್ರೀಯ ನಾಯಕತ್ವಗಳ ಚುನಾವಣಾ ಅವಲೋಕನ ಸಭೆ ಇಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News