ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆಅಂತಿಮ ಪಟ್ಟಿಯಲ್ಲಿ ನಾಲ್ವರ ಹೆಸರು
Update: 2016-06-27 14:38 IST
ಹೊಸದಿಲ್ಲಿ, ಜೂ.27: ರಘುರಾಮ್ ರಾಜನ್ ನಿವೃತ್ತಿಯಿಂದ ತೆರವಾಗಲಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ನೇಮಕಗೊಳ್ಳರುವ ಅಧಿಕಾರಿಗಳ ಅಂತಿಮ ಪಟ್ಟಿಯಲ್ಲಿ ನಾಲ್ವರು ಸ್ಥಾನ ಪಡೆದಿದ್ದಾರೆ.
ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಉರ್ಜಿತ್ ಪಟೇಲ್, ಮಾಜಿ ಉಪ ಗವರ್ನರ್ಗಳಾದ ಸಬೀರ್ ಗೋಕರಣ್ ಮತ್ತು ರಾಕೇಶ್ ಮೋಹನ್ ,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಕೇಂದ್ರ ಸರಕಾರ ನಾಲ್ವರ ಹೆಸರನ್ನು ಪ್ರಕಟಿಸಿದೆ.