×
Ad

ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕಾರ್ಪೊರೇಟ್ ಸೈಕೋಲೊಜಿ ಸ್ನಾತಕೋತ್ತರ ವಿಭಾಗ ಆರಂಭ

Update: 2016-06-27 16:29 IST

ಮಂಗಳೂರು, ಜೂ.27: ಸ್ವಾಯತ್ತ ಸಂತ ಅಲೋಶಿಯಸ್ ಕಾಲೇಜು ಎಂ.ಎಸ್ಸಿ. ಕಾರ್ಪೊರೇಟ್ ಸೈಕೋಲೊಜಿ ಎನ್ನುವ ವಿಶಿಷ್ಟ ಸ್ನಾತಕೋತ್ತರ ಕೋರ್ಸನ್ನು ಪ್ರಾರಂಭಿಸಿದೆ.

ಮನಃಶಾಸ್ತ್ರ, ವಾಣಿಜ್ಯ ಹಾಗೂ ವ್ಯವಹಾರೋದ್ಯಮ ಮುಂತಾದ ಅಂತರ್ವಿಭಾಗದ ವಿಷಯಗಳನ್ನೊಳಗೊಂಡ ಈ ಕೋರ್ಸಿನಲ್ಲಿ ಕಂಪೆನಿ ನಾಯಕತ್ವ, ಕಾರ್ಪೊರೇಟ್ ನೀತಿ ಶಾಸ್ತ್ರ, ಆಡಳಿತ, ಕಾರ್ಪೊರೇಟ್ ಕೌನ್ಸೆಲಿಂಗ್ ಸೇರಿದಂತೆ ಉದ್ಯಮಗಳಿಗೆ ಅಗತ್ಯವಾಗಿರುವ ವಿಷಯಗಳನ್ನು ಕಲಿಸಲಾಗುತ್ತದೆ. ಕಂಪೆನಿಗಳಿಂದ ಪ್ರಚಲಿತ ವಿದ್ಯಮಾನಗಳನ್ನು ಸಂಗ್ರಹಿಸಿ ಕೇಸ್ ಅಧ್ಯಯನ, ಪ್ರೊಜೆಕ್ಟ್ ರಿಪೋರ್ಟ್, ಸೆಮಿನಾರ್ ಮುಂತಾದ ನವೀನ ವಿಧಾನವನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶವಿದೆ. ಒಂದು ಸೆಮಿಸ್ಟರ್ ಸಂಪೂರ್ಣವಾಗಿ ಆಯ್ದ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಅವಕಾಶವನ್ನು ಕಲ್ಪಿಸಲಾಗುವುದು.

ಕೈಗಾರಿಕೋದ್ಯಮಕೆ  ಅಗತ್ಯವಾಗಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳು ಇವೆ. ಕಾರ್ಪೊರೇಟ್ ಕೌನ್ಸೆಲರ್, ಜಾಬ್ ಅನಾಲಿಸ್ಟ್, ಮಾರ್ಕೆಟ್ ಅನಾಲಿಸ್ಟ್ ಮುಂತಾದ ಉದ್ಯೋಗಗಳಿಗೆ ಅನುಕೂಲವಾಗುವಂತೆ ಈ ಕೋರ್ಸನ್ನು ರಚಿಸಲಾಗಿದೆ.
ಬಿ.ಕಾಂ, ಬಿಬಿಎಂ ಪದವೀಧರರು ಹಾಗೂ ಮನಶಾಸ್ತ್ರದಲ್ಲಿ (ಸೈಕೊಲೊಜಿ) ಪದವಿ ಪಡೆದವರು ಬಿಹೆಚ್.ಎಂ, ಬಿಎಚ್.ಆರ್.ಡಿ, ಬಿ.ಎಸ್.ಡಬ್ಲ್ಯು ಪದವಿ ಪಡೆದವರು ಈ ಕೋರ್ಸಿಗೆ ಅರ್ಹತೆ ಹೊಂದಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಕಾಲೇಜಿನ ದೂ.ಸಂ.: 0824-2449700 / 701ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ರೆ.ಫಾ.ಸ್ವೀಬರ್ಟ್ ಡಿಸಿಲ್ವಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News