ಸುಳ್ಯ: ಚಿನ್ನದ ಪಾಲಿಶ್ ಅಂಗಡಿಯಲ್ಲಿ ಕಳ್ಳತನ
Update: 2016-06-27 18:07 IST
ಸುಳ್ಯ, ಜೂ.27: ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಚಿನ್ನದ ಪಾಲಿಶ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 60 ಗ್ರಾಂ ಬೆಳ್ಳಿ ಸೇರಿಂದತೆ 20 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ದೋಚಿದ್ದಾರೆ.
ಶ್ರೀರಾಂಪೇಟೆಯ ಕೊಯಿಂಗೋಡಿ ಕಾಂಪ್ಲೆಕ್ಸ್‌ನಲ್ಲಿರುವ ಡಿಪಿ ಸಿಲ್ವರ್ ಆ್ಯಂಡ್ ಗೋಲ್ಡ್ ಪಾಲಿಶ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಅಂಗಡಿ ಮಾಲಕ ಪ್ರಶಾಂತ್ ಪಾಟೀಲ್ ರವಿವಾರ ಮಧ್ಯಾಹ್ನ ಅಂಗಡಿಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಬಂದಾಗ ಅಂಗಡಿ ಬಾಗಿಲು ತೆರೆದಿದ್ದು, 22 ಇಂಚಿನ ಹೊಸ ಟಿವಿ, ಮೂರು ಮೊಬೈಲ್ ಸೆಟ್‌ಗಳು ಹಾಗೂ 60 ಗ್ರಾಂ ಬೆಳ್ಳಿಯನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.
ಪುತ್ತೂರು ಎಎಸ್ಪಿ ರಿಶ್ಯಂತ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶ್ವಾನ ದಳವನ್ನು ಕರೆತರಲಾಗಿತ್ತು.