ಇನ್ನು ವರ್ಷವಿಡೀ ಉಮ್ರಾ ನಿರ್ವಹಿಸಲು ಅವಕಾಶ
Update: 2016-06-27 18:24 IST
ಜಿದ್ದಾ , ಜೂ. 27 : ಉಮ್ರಾ ಮಾಡಲು ವರ್ಷವಿಡೀ ಅವಕಾಶ ನೀಡಲು ಸೌದಿಯ ಹಜ್ ಹಾಗೂ ಉಮ್ರಾ ಸಚಿವಾಲಯ ಚಿಂತನೆ ನಡೆಸಿದೆ. ಇದು ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಹೀಗಾದಲ್ಲಿ ಹಜ್ ಅವಧಿ ಹೊರತುಪಡಿಸಿ ವರ್ಷದ ಯಾವುದೇ ಸಮಯದಲ್ಲೂ ಉಮ್ರಾ ಮಾಡುವ ಅವಕಾಶ ಸಿಗಲಿದೆ. ನ್ಯಾಷನಲ್ ಕಮಿಟಿ ಫಾರ್ ಹಜ್ ಎಂಡ್ ಉಮ್ರಾ ದ ಉಪಾಧ್ಯಕ್ಷ ಅಬ್ದುಲ್ಲಾಹ್ ಖಾದಿ ಅವರು ಇದನ್ನು ಖಚಿತಪಡಿಸಿದ್ದಾರೆ.
ಈಗ ಜೂನ್ 20 ರಿಂದ ಉಮ್ರಾ ವೀಸಾ ನೀಡುವುದನ್ನು ನಿಲ್ಲಿಸಲಾಗಿದೆ. ಈ ವರ್ಷ 64 ಲಕ್ಷ ಉಮ್ರಾ ಯಾತ್ರಿಗಳು ಬಂದಿದ್ದು, ಸೌದಿ ಸರಕಾರ 80 ಲಕ್ಷ ಜನರಿಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿತ್ತು.