ವಿಕಾಸ್ ಪಿ.ಯು. ಕಾಲೇಜಿಗೆ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಭೇಟಿ
Update: 2016-06-27 19:18 IST
ಮಂಗಳೂರು, ಜೂ.27: ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿಗೆ ಕೇಂದ್ರ ಯೋಗ ಮತ್ತು ಆಯುಷ್ ಖಾತೆ ಸಚಿವ ಶ್ರೀಪಾದ್ ಯಸ್ಸೊ ನಾಯಕ್ ಭೇಟಿ ನೀಡಿದರು.
ಕಾಲೇಜಿನ ಯೋಗ ಕ್ಲಬ್, ಕಲರ್ ಥೆರಪಿ ಕೋಣೆ ಮತ್ತು ಮೂಲ ಸೌಕರ್ಯಗಳನ್ನು ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಲ್ಲದೆ, ಕಾಲೇಜಿನ ಮೂಲಕ ಹಮ್ಮಿಕೊಂಡಿರುವ ವಿಕಾಸ್ ಡ್ರೋನ್ ಯೋಜನೆಯನ್ನು ಶ್ಲಾಘಿಸಿದ ಸಚಿವರು, ಯೋಜನೆಯನ್ನು ಮುಂದಿನ ಹಂತಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಆಗಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್, ಟ್ರಸ್ಟಿ ಜೆ. ಕೊರಗಪ್ಪ, ಸಲಹೆಗಾರ ಡಾ. ಜಿ. ಅನಂತ ಪ್ರಭು, ಪ್ರಾಂಶುಪಾಲ ವೆಂಕಟ ರಾಯುಡು ಮತ್ತಿತರರು ಉಪಸ್ಥಿತರಿದ್ದರು.