ಬಂಟ್ವಾಳ: ಮಸೀದಿಯ ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು
Update: 2016-06-27 20:54 IST
ಬಂಟ್ವಾಳ, ಜೂ. 27: ಇಲ್ಲಿನ ಕುದ್ದುಪದವು ಮಸೀದಿಯ ಶೆಡ್‌ನಲ್ಲಿರಿಸಿದ್ದ ಬೈಕೊಂದನ್ನು ಕಳ್ಳರು ಕಳವುಗೈದು ಪರಾರಿಯಾಗಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಕಳ್ಳತನವಾದ ಬೈಕ್ ಕುದ್ದುಪದವು ಮಸೀದಿ ಖತೀಬ್ ನಾವೂರು ನಿವಾಸಿ ಸಂಶುದ್ದೀನ್ ಎಂಬವರಿಗೆ ಸೇರಿದ್ದಾಗಿದೆ.
ಅವರು ರವಿವಾರ ರಾತ್ರಿ ಮಸೀದಿಯ ಶೆಡ್‌ನಲ್ಲಿ ತನ್ನ ಪಲ್ಸರ್ ಬೈಕ್‌ನ್ನು ನಿಲ್ಲಿಸಿದ್ದರು. ಸೋಮವಾರ ಬೆಳಗ್ಗೆ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಬೈಕ್‌ನ ಸಮೀಪ ಇನ್ನೊಂದು ಹಳೆಯದಾದ ಬೈಕ್‌ನ್ನು ನಿಲ್ಲಿಸಲಾಗಿತ್ತಾದರೂ ಕಳ್ಳರು ಹೊಸ ಬೈಕನ್ನು ಮಾತ್ರ ಅಪಹರಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.