ಉಳ್ಳಾಲ ಕಡಲ್ಕೊರೆತ: ತುತು೯ ರಕ್ಷಣಾ ಕಾಮಗಾರಿಗೆ ಸಚಿವರ ಸೂಚನೆ
Update: 2016-06-27 21:11 IST
ಉಳ್ಳಾಲ, ಸೋಮೇಶ್ವರ, ಮತ್ತಿತರ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನಿವಾಸಿಗಳ ರಕ್ಷಣೆಗೆ ತಾತ್ಕಾಲಿಕ ರಕ್ಷಣಾ ಕೆಲಸಗಳನ್ನು ಕೂಡಲೇ ಕೈಗೆತ್ತಿಕೊಳ್ಳಲು ಆಹಾರ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖಾ ಇಂಜಿನಿಯರ್ ಗಳಿಗೆ ನಿದೇ೯ಶನ ನೀಡಿರುವ ಸಚಿವರು, ಲೋಕೋಪಯೋಗಿ ಮತ್ತು ಬಂದರು ಸಚಿವ ಮಹಾದೇವಪ್ಪ ಅವರೊಂದಿಗೂ ಇಂದು ಈ ಸಂಬಂಧ ಮಾತುಕತೆ ನಡೆಸಿ, ಉಳ್ಳಾಲ ಕಡಲ್ಕೊರೆತದ ಅಪಾಯದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದ್ದಾರೆ.