ಚರ್ಚ್ ಸಲಿಂಗಿಗಳಲ್ಲಿ ಕ್ಷಮೆ ಯಾಚಿಸಬೇಕು: ಪೋಪ್ ಫ್ರಾನ್ಸಿಸ್

Update: 2016-06-27 16:25 GMT

ವ್ಯಾಟಿಕನ್ ಸಿಟಿ (ರೋಮ್), ಜೂ. 27: ಸಲಿಂಗಕಾಮಿಗಳನ್ನು ನಡೆಸಿಕೊಂಡ ರೀತಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್ನರು ಹಾಗೂ ರೋಮನ್ ಕ್ಯಾಥೊಲಿಕ್ ಚರ್ಚ್ ಅವರ ಕ್ಷಮೆ ಯಾಚಿಸಬೇಕು ಎಂದು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಆರ್ಮೇನಿಯ ಭೇಟಿಯ ಬಳಿಕ ರೋಮ್‌ಗೆ ವಾಪಸಾಗುವ ವೇಳೆ ವಿಮಾನದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಚರ್ಚ್‌ಗಳು ಮಹಿಳೆಯರನ್ನು ನಡೆಸಿಕೊಂಡ ಬಗ್ಗೆ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಕುರುಡುತನ ಪ್ರದರ್ಶಿಸಿದ ಬಗ್ಗೆ ಹಾಗೂ ಹಲವು ಶಸ್ತ್ರಾಸ್ತ್ರಗಳಿಗೆ ಅನುಮೋದನೆ ನೀಡಿರುವ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯಪಟ್ಟರು.

ಚರ್ಚ್‌ಗಳು ಸಲಿಂಗಿಗಳ ಕ್ಷಮೆ ಯಾಚಿಸುವಂತೆ ಜರ್ಮನ್ ರೋಮನ್ ಕ್ಯಾಥೊಲಿಕ್ ಕೆಥಡ್ರೆಲ್ ಆಗ್ರಹಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೋಪ್, ಆ ಆಗ್ರಹಕ್ಕೆ ತನ್ನ ಬೆಂಬಲವಿದೆ ಎಂದರು.

ಫ್ಲೋರಿಡದ ಒರ್ಲ್ಯಾಂಡೊ ಸಲಿಂಗಿಗಳ ಕ್ಲಬ್‌ನಲ್ಲಿ ನಡೆದ 49 ಮಂದಿಯ ಹತ್ಯೆ ಬಗ್ಗೆ ತುರ್ತು ಕ್ಷಮೆ ಕೋರುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಗೆ, ಪೋಪ್ ಅವರ ವಿಷಾದದ ನೋಟವೇ ಉತ್ತರವಾಯಿತು.

ಸಲಿಂಗಕಾಮ ಪಾಪವಲ್ಲ ಎಂದು ಚರ್ಚ್‌ಗಳು ಬೋಧಿಸುತ್ತವೆ. ಆದರೆ ಸಲಿಂಗಕಾಮ ಹಾಗೂ ಸಲಿಂಗಿಗಳು ಪರಿಶುದ್ಧರಾಗಿರಬೇಕು ಎಂದು ಪೋಪ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News