×
Ad

ಇಂಗ್ಲೆಂಡ್‌ಗೆ ಶಾಕ್ ನೀಡಿದ ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್

Update: 2016-06-28 10:08 IST

 ನೈಸ್(ಫ್ರಾನ್ಸ್), ಜೂ.28: ಪ್ರಮುಖ ಟೂರ್ನಿ ಯುರೋ ಕಪ್‌ನಲ್ಲಿ ಆಡುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್ ಯಾರೂ ನಿರೀಕ್ಷಿಸಿದ ರೀತಿಯಲ್ಲಿ ಪವಾಡ ಮಾಡಿದೆ. ಅದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ತಂಡವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಇಂಗ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಭಾರೀ ಆಘಾತ ನೀಡಿದೆ.

ಸೋಮವಾರ ಇಲ್ಲಿ ನಡೆದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ರಾಗ್ನರ್ ಸಿಗುರ್ಡೆಸ್ಸನ್ ಹಾಗೂ ಕೊಲ್ಬೆನ್ ಸಿಗ್‌ಥಾರ್ಸನ್ ತಲಾ ಒಂದು ಗೋಲು ಬಾರಿಸಿ ಐಸ್‌ಲ್ಯಾಂಡ್‌ನ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.

ಕೇವಲ 330,000 ಜನಸಂಖ್ಯೆ ಹೊಂದಿರುವ ಐಸ್‌ಲ್ಯಾಂಡ್ ಕ್ವಾರ್ಟರ್‌ಫೈನಲ್‌ನಲ್ಲಿ ಆತಿಥೇಯ ಫ್ರಾನ್ಸ್ ತಂಡದ ಸವಾಲು ಎದುರಿಸಲಿದೆ. ಇಂಗ್ಲೆಂಡ್ ತಂಡ ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್‌ಗೆ ಶರಣಾಗಿ ಯುರೋ ಚಾಂಪಿಯನ್‌ಶಿಪ್‌ನಿಂದ ಹೊರ ನಡೆದಿರುವುದು 53 ಮಿಲಿಯನ್ ಜನಸಂಖ್ಯೆ ಹೊಂದಿರುವ ಇಂಗ್ಲೆಂಡ್‌ನ ಫುಟ್ಬಾಲ್ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ.

ಐಸ್‌ಲ್ಯಾಂಡ್ ವಿರುದ್ಧ ಸೋತಿರುವ ಇಂಗ್ಲೆಂಡ್ ಆಟಗಾರರು ಆಘಾತಕ್ಕೆ ಒಳಗಾಗಿದ್ದರೆ, ಮತ್ತೊಂದೆಡೆ, ಐಸ್‌ಲ್ಯಾಂಡ್ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

 ಮತ್ತೊಂದು ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಇಟಲಿ ತಂಡ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದು, ಮುಂದಿನ ಸುತ್ತಿನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News