×
Ad

ನಿರಾಶ್ರಿತರ ಪ್ರವಾಹ ಅತಿಥೇಯ ರಾಷ್ಟ್ರಗಳನ್ನು ಬಲಪಡಿಸಲಿದೆ: ಅಧ್ಯಯನ ವರದಿ

Update: 2016-06-28 12:27 IST

ಕ್ಯಾಲಿಫೋರ್ನಿಯ, ಜೂನ್ 28: ನಿರಾಶ್ರಿತರಾಗಿ ಹರಿದುಬರುವ ಜನರು ಅವರಿಗೆ ವಾಸ ಸೌಕರ್ಯ ನೀಡುವ ದೇಶಗಳಿಗೆ ಆರ್ಥಿಕವಾಗಿ ವರದಾನವಾಗಲಿದ್ದಾರೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಆಫ್ರಿಕನ್ ದೇಶವಾದ ಕೋಂಗೊದಿಂದ ರುವಾಂಡಕ್ಕೆ ಬಂದ ನಿರಾಶ್ರಿತರು ವಾಸಿಸುವ ಪ್ರದೇಶವನ್ನು ಈ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿತ್ತು. ವಿಶ್ವಸಂಸ್ಥೆ ಇಲ್ಲಿನವರಿಗೆ ನೀಡುವ ಆರ್ಥಿಕ ನೆರವು ಪ್ರದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಯನ್ನು ಪೋಷಿಸುತ್ತಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಸಂಶೋಧಕರು ಅರಿತುಕೊಂಡಿದ್ದಾರೆ.

ರುವಾಂಡದ ಮೂರು ನಿರಾಶ್ರಿತ ಶಿಬಿರಗಳಲ್ಲಿ ಅಧ್ಯಯನ ನಡೆಸಿದ್ದು ವಿಶ್ವಸಂಸ್ಥೆ ಎರಡು ಶಿಬಿರಗಳಿಗೆ ಧನಸಹಾಯ ನೀಡಿತ್ತು. ಮೂರನೇ ಶಿಬಿರಕ್ಕೆ ಆಹಾರದಂತಹ ಆವಶ್ಯಕವಸ್ತುಗಳನ್ನುನೀಡಿತ್ತು. ಧನ ಸಹಾಯ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಆಯಾ ಪ್ರದೇಶಗಳಿಗಿವೆ ಎನ್ನಲಾಗಿದೆ. ಹಿರಿಯ ನಿರಾಶ್ರಿತ ವ್ಯಕ್ತಿಗೆ ಒಂದು ವರ್ಷದಲ್ಲಿ 120-126 ಡಾಲರ್ ನೀಡಲಾಗಿತ್ತು. ಇದರಿಂದಾಗಿ ಪ್ರದೇಶದ ಜನರ ವರಮಾನ ಶೇ< 63ರಿಂದ 96ರಷ್ಟು ಹೆಚ್ಚಳವಾಗಿದೆ. ಜೊತೆಗೆ ನಿರಾಶ್ರಿತರ ವ್ಯಾಪಾರ ವ್ಯವಹಾರಗಳಿಂದಾಗಿ ರುವಾಂಡದ ಒಟ್ಟು ವರಮಾನದಲ್ಲಿಯೂ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News