ಅಲ್‌ಅಕ್ಸಾ ಮಸೀದಿಯಲ್ಲಿ ಇಸ್ರೇಲ್ ಪೊಲೀಸರ ದಾಂಧಲೆ: ಹಲವಾರು ಮಂದಿಗೆ ಗಾಯ!

Update: 2016-06-28 08:27 GMT

ಜೆರುಸಲೇಂ, ಜೂನ್ 28: ಫೆಲೆಸ್ತೀನ್‌ನ ಪವಿತ್ರ ಅಲ್‌ಅಕ್ಸಾ ಮಸೀದಿಗೆ ನುಗ್ಗಿ ಇಸ್ರೇಲ್ ಪೊಲೀಸರು ದಾಂಧಲೆ ನಡೆಸಿದ ಪರಿಣಾಮ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಸೀದಿಯೊಳಗೆ ನುಗ್ಗಿದ ಯಹೂದಿ ಗುಂಪು ಅಲ್ಲಿ ಆರಾಧನಾಕರ್ಮ ನಿರ್ವಹಿಸುತ್ತಿದ್ದವರ ಫೆಲೆಸ್ತೀನಿಯರ ಮೇಲೆ ಹಲ್ಲೆಗೆ ಇಳಿದ ಪರಿಣಾಮ ನಡೆದ ಘರ್ಷಣೆಯಲ್ಲಿ ಹಲವಾರು ಫೆಲೆಸ್ತೀನಿಯರುಗಾಯಗೊಂಡಿದ್ದಾರೆ. ಗ್ಯಾಸ್ ಬಾಂಬ್ ಸಹಿತ ಹಲವು ಆಯುಧಗಳಿದ್ದ ಯಹೂದಿಯರ ಗುಂಪು ಗೊಂದಲ - ಗಲಾಟೆ ಸೃಷ್ಟಿಸಿ ಅಲ್‌ಅಕ್ಸಾ ಮಸೀದಿಯಲ್ಲಿ ಭಯಾನಕ ವಾತಾವರಣವನ್ನು ಹುಟ್ಟುಹಾಕಿತ್ತು.

ಇವರಿಗೆ ಬೆಂಬಲವಾಗಿ ಇಸ್ರೇಲ್ ಪೊಲೀಸರೂ ಮಸೀದಿಗೆ ನುಗ್ಗಿ ದಾಂಧಲೆ ನಡೆಸಿದರು. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಪವಿತ್ರರಮಝಾನ್‌ನಲ್ಲಿ ಆರಾಧನಾ ಕರ್ಮಗಳನ್ನು ನಿರ್ವಹಿಸಲು ಮಸೀದಿಗೆ ಬಂದ ಮೂವತ್ತಕ್ಕಿಂತಲೂ ಹೆಚ್ಚು ಫೆಲೆಸ್ತೀನಿಯರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಭಕ್ತರನ್ನು ಬಲಪ್ರಯೋಗಿಸಿ ಮಸೀದಿಯಿಂದ ಹೊರದಬ್ಬಿದ ನಂತರ ಇಸ್ರೇಲ್ ಪೊಲೀಸರು ಕ್ರೂರವಾಗಿ ಹೊಡೆದಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News