ಶಿಯಾ ನಾಯಕನ ಪೌರತ್ವ ರದ್ದು ಪ್ರಕರಣ: ಬಹ್ರೈನ್‌ಗೆ ಇರಾನ್‌ನಿಂದ ಮತ್ತೆ ಎಚ್ಚರಿಕೆ!

Update: 2016-06-28 08:52 GMT

ಟೆಹ್ರಾನ್,ಜೂನ್ 28: ವಿದೇಶಿರಾಷ್ಟ್ರಗಳೊಂದಿಗೆ ಸಂಬಂಧವಿರಿಸಿ ಆಕ್ರಮಣಕ್ಕೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿ ಶಿಯಾ ನಾಯಕನ ಪೌರತ್ವ ರದ್ದು ಮಾಡಿದ ಬಹ್ರೈನ್‌ನ ಕ್ರಮದ ವಿರುದ್ಧ ಇರಾನ್ ಪರಮೋನ್ನತನಾಯಕ ಅಲಿ ಖಾಮಿನೈ ಎಚ್ಚರಿಕೆಯನ್ನು ಪುನರುಚ್ಚರಿಸಿದ್ದಾರೆ. "ಧೀರರಾದ ಬಹ್ರೈನ್ ಯುವಕರಿಗೆ ಸರಕಾರದೊಂದಿಗೆ ಸಂಘರ್ಷಕ್ಕಿಳಿಯುವುದಕ್ಕೆ ದಾರಿ ಮಾಡಿಕೊಡುವಂತಹ ತೀರ್ಮಾನವಿದು"ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಬಹ್ರೈನ್ ತೀರ್ಮಾನ ಮೂರ್ಖತನದ್ದೆಂದು ಅಧಿಕೃತ ಚ್ಯಾನೆಲ್ ಪ್ರಸಾರಿಸಿದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಧೀರರಾದ ಬಹ್ರೈನ್ ಯುವಕರಿಗೆ ಸರಕಾರದೊಂದಿಗೆ ಘರ್ಷಣೆಗಿಳಿಯಲಿಕ್ಕಿದ್ದ ಅಡ್ಡಿ ತೆರವು ಗೊಳಿಸಲಾಗಿದೆ. ಶಿಯಾ ನಾಯಕನ ವಿರುದ್ಧ ಬಹ್ರೈನ್ ಕ್ರಮಕೈಗೊಂಡ  ನಂತರ ಬಹ್ರೈನ್‌ಗೆ ತಾಕೀತು ನೀಡುವ ಇರಾನ್‌ನ ಹೇಳಿಕೆಗಳಲ್ಲಿ ಖಾಮಿನೈ ಹೇಳಿಕೆ ಕೊನೆಯದಾಗಿದೆ. ಬಹ್ರೈನ್‌ನಲ್ಲಿ ರಕ್ತಕಲುಷಿತ ಇಂತಿಫಾದ ಆರಂಭವಾಗಬಹುದು ಎಂದು ಇರಾನ್ ರೆವುಲ್ಯೂಷನರಿ ಗಾರ್ಡ್‌ನಾಯಕ ಜನರಲ್ ಖಾಸಿಂ ಸುಲೈಮಾನ್ ಈ ಮೊದಲುಎಚ್ಚರಿಕೆಯನ್ನು ನೀಡಿದ್ದರು. ಅದೇ ರೀತಿ ಇರಾನ್‌ನೊಡನೆಸಂಬಂಧ ಇಟ್ಟುಕೊಂಡಿರುವ ಇರಾನ್‌ನ ಕೆಲವು ಸಶಸ್ತ್ರ ಗುಂಪುಗಳು ಬಹ್ರೈನ್ ವಿರುದ್ಧ ಬಹಿರಂಗ ಸವಾಲು ಹಾಕಿವೆ.

ಅಂತಾರಾಷ್ಟ್ರೀಯ ಶಕ್ತಿಗಳೊಂದಿಗೆ ಸಂಬಂಧ ಇರುವ ಸಂಘಟನೆಗಳಿಗೆ ರೂಪು ನೀಡಿ ದೇಶದಲ್ಲಿ ವರ್ಗೀಯವಾದಿ ಅವಸ್ಥೆಯನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಈಸಾ ಖಾಸಿಂರ ಪೌರತ್ವವನ್ನು ಇರಾನ್ ಹಿಂಪಡೆದಿತ್ತು. ಅಂತಾರಾಷ್ಟ್ರೀಯ ಶಕ್ತಿಗಳ ರಾಜಕೀಯ ಹಿತಾಸಕ್ತಿಗಾಗಿ ಧಾರ್ಮಿಕ ವೇದಿಕೆಗಳನ್ನು ದುರಪಯೋಗಿಸಿದ ಆರೋಪವೂ ಅವರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News