×
Ad

ಉಳ್ಳಾಲ : ಎಸ್‌ಬಿಎಸ್ ವತಿಯಿಂದ ರಿಫ್ರೆಶ್‌ಮೆಂಟ್ ಮೀಟ್

Update: 2016-06-28 19:30 IST

ಉಳ್ಳಾಲ, ಜೂ.28: (ಸುನ್ನೀ ಬಾಲ ಸಂಘ ಎಸ್‌ಬಿಎಸ್) ಉಳ್ಳಾಲ ಝೋನ್ ಇದರ 6ನೆ ವಾರ್ಷಿಕ ದಿನಾಚರಣೆಯು ಉಳ್ಳಾಲದ ನಗರಸಭಾ ಸಮುದಾಯ ಭವನದಲ್ಲಿ ನಡೆಯಿತು. ಮುಈನುದ್ದೀನ್ ಮುಸ್ಲಿಯಾರ್ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಈ ವೇಳೆ ನಡೆದ ಆರಿಸಿ ನಟಿಸು ಸ್ಪರ್ಧೆಯಲ್ಲಿ ಸುಫೈದ್, ಯಹ್ಯಾ ಮತ್ತು ಹಾಡು ಸ್ಪರ್ಧೆಯಲ್ಲಿ ನಈಮ್ ಅಳೇಕಲ ಪ್ರಥಮ ಸ್ಥಾನ ಪಡೆದರು. ಫಾಝಿಲ್ ಅಳೇಕಲ ಮತ್ತು ತಾಜುದ್ದೀನ್ ಹಳೆಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳ್ಳಾಲ ಸೆಕ್ಟರ್ ಎಸ್ಸೆಸ್ಸೆಫ್‌ನ ಪ್ರಧಾನ ಕಾರ್ಯದರ್ಶಿ ಸೈಯದ್ ಖುಬೈಬ್ ತಂಙಳ್ ಉಧ್ಘಾಟಿಸಿದರು. ಉಳ್ಳಾಲ ಎಸ್‌ವೈಎಸ್ ನಾಯಕ ಉಸ್ಮಾನ್ ಸಖಾಫಿ ಮಾತನಾಡಿದರು.

ಈ ವೇಳೆ ಇಶ್ಕೇ ರಸೂಲ್ ಬೇಸಿಗೆ ಶಿಬಿರದ ತರಬೇತುದಾರರಾದ ನವಾಝ್ ಸಖಾಫಿ ಅಲ್ ಅಮ್ಜದಿ ಮತ್ತು ಫಾಝಿಲ್ ಅಳೇಕಲರನ್ನು ಅಭಿನಂದಿಸಲಾಯಿತು. ಬೇಸಿಗೆ ಶಿಬಿರದಲ್ಲಿ ಅತ್ಯುತ್ತಮ ಗುಣನಡತೆ ತೋರಿಸಿದ ನಈಮ್ ಅಳೇಕಲ ಮತ್ತು ಅಶ್ವಿದ್ ಕೊಟೇಪುರ ಇವರಿಗೆ ಮುಹಮ್ಮದ್ ಫಾಝಿಲ್ ಅಳೇಕಲ ಸನ್ಮಾನಿಸಿದರು. ಈ ಸಂದರ್ಭ 2016-17ನೆ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅರ್ಶಕ್, ಫಾಝಿಲ್ ಮತ್ತು ರಾಫಿ ಮುಕ್ಕಚ್ಚೇರಿ, ಅಶ್ವಿದ್ ಮತ್ತು ಸಾಹಿಲ್ ಕೊಟೇಪುರ, ಬಿಲಾಲ್ ಮಂಚಿಲ, ದಿಲ್ಬಾಝ್ ಬಸ್ತಿಪಡ್ಪು, ಫಹಝ್ ತಂಙಳ್, ನಈಮ್ ಮತ್ತು ಅಕೀಲ್ ಅಳೇಕಲ, ಮಿಸ್ಬಾ ಮತ್ತು ಸೌಹಾನ್ ಅಕ್ಕರೆಕೆರೆ ಮತ್ತು ಫಾಝಿಲ್ ಅಳೇಕಲ ಸದಸ್ಯರಾಗಿ ಆಯ್ಕೆಯಾದರು.

ಅಝೀಝ್ ಸಅದಿ ಉಸ್ತಾದರ ನಿರ್ದೇಶಕತ್ವದಲ್ಲಿ ತೊಕ್ಕೊಟ್ಟು ವಲಯ ಎಸ್‌ಬಿಎಸ್ ಮೇಲ್ವಿಚಾರಣೆ ಸಮಿತಿಯ ಉಸ್ತುವಾರಿಯಾಗಿ ಫಾಝಿಲ್ ಅಳೇಕಲ, ಸದಸ್ಯರುಗಳಾಗಿ ರಾಫಿ ಮದನಿ ನಗರ, ನಾಫಿ ಅಳೇಕಲ ಮತ್ತು ಬಾತಿಷಾ ಮುಹಮ್ಮದ್ ಮಂಚಿಲ ಮತ್ತು ಉಳ್ಳಾಲ ವಲಯ ಎಸ್‌ಬಿಎಸ್. ಮೇಲ್ವಿಚಾರಣೆ ಸಮಿತಿಯ ಉಸ್ತುವಾರಿಯಾಗಿ ತಾಜುದ್ದೀನ್ ಹಳೆಕೋಟೆ ಸದಸ್ಯರುಗಳಾಗಿ ಫಾಶಿರ್ ಬಸ್ತಿಪಡ್ಪು, ಮುಝಫ್ಫರ್ ಅಝಾದ್ ನಗರ, ನಿಝಾಮುದ್ದೀನ್ ಶಾ ಕೋಟೆಪುರ ಮತ್ತು ಮುಹಾಝ್ ಮೇಲಂಗಡಿರನ್ನು ನೇಮಿಸಲಾಯಿತು.

ಇದೇ ವೇಳೆ ಹಳೆ ಸಮಿತಿ ಪದಾಧಿಕಾರಿಗಳಾದ ಮುಹಾಝ್, ಫಾಶಿರ್, ಆಸಿಮ್ ಮೇಲಂಗಡಿ ಮತ್ತು ನಿಝಾಮುದ್ದೀನ್ ಒಂಭತ್ತುಕೆರೆ ಹಾಲಿ ಸಮಿತಿಗೆ ಧ್ವಜ ಹಸ್ತಾಂತರಿಸಿದರು. ಎಸ್‌ಬಿಎಸ್. ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಬಿರದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಝೀಝ್ ಫಿದಾ, ನವಾಝ್ ಮೇಲಂಗಡಿ, ಇಮ್ರಾನ್ ಮಿಲ್ಲತ್ ನಗರ, ಎಸ್ಸೆಸ್ಸೆಫ್ ಕ್ಯಾಂಪಸ್‌ನ ನೌಫಲ್ ಕೊಟೆಪುರ ಮತ್ತು ಸಫ್ವಾನ್ ಉಳ್ಳಾಲ ಬೈಲು ಉಪಸ್ಥಿತರಿದ್ದರು. ಎಸ್‌ಬಿಎಸ್ ಉಳ್ಳಾಲ ಝೋನ್ ಅಧ್ಯಕ್ಷ ಇಸ್ಮಾಯೀಲ್ ಮುಹಾಝ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News