ಪೊಲೀಸರಿಂದ ನರೇಶ್ ಶೆಣೈ ವಿಚಾರಣೆ
Update: 2016-06-28 20:28 IST
ಮಂಗಳೂರು, ಜೂ.28: ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈಯ ವಿಚಾರಣೆ ಇಂದು ನಡೆದಿದೆ.
ಮಂಗಳೂರು ಉಪವಿಭಾಗದ ಎಸಿಪಿ ಕೆ.ತಿಲಕಚಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಈಗಾಗಲೆ ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಶ್ರಿಕಾಂತ್‌ನನ್ನು ನ್ಯಾಯಾಲಯದ ಮೂಲಕ ಪೊಲೀಸರು ಸೋಮವಾರ ಒಂದು ದಿನದ ಕಸ್ಟಡಿಗೆ ತೆಗೆದುಕೊಂಡಿದ್ದರು. ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆ ತನಕ ವಿಚಾರಣೆ ನಡೆಸಿದ ನಂತರ ಮತ್ತೆ ಶ್ರೀಕಾಂತ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬುಧವಾರದ ತನಕ ನರೇಶ್ ಶೆಣೈ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾನೆ. ಗುರುವಾರ ಪೊಲೀಸರು ನರೇಶ್ ಶೆಣೈಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ.