×
Ad

ನೆರೆಮನೆಯವರ ಎಡವಟ್ಟಿನಿಂದ ಕೃಷಿನಾಶ: ಆರೋಪ

Update: 2016-06-28 23:56 IST

ಮಂಗಳೂರು, ಜೂ.28: ನೆರೆಮನೆಯವರ ಎಡವಟ್ಟಿನಿಂದಾಗಿ ತಮ್ಮ ತೋಟ ಹಾಗೂ ಗದ್ದೆಗಳು ನಾಶಗೊಳ್ಳುವ ಭೀತಿ ಎದುರಾಗಿದೆ. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಕೆಂಜಾರು ಗ್ರಾಮದ ಪಾದೆಮನೆಯ ನಿವಾಸಿ ಭೋಜ ವಿ. ಸಾಲ್ಯಾನ್ ಆರೋಪಿಸಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ಬಜ್ಪೆ, ಕರಂಬಾರು-ಕೆಂಜಾರು ಗ್ರಾಮದಲ್ಲಿ ಸುಮಾರು ತಮ್ಮ ಹತ್ತು ಎಕರೆ ಪ್ರದೇಶದ ನೀರು ಗದ್ದೆಗಳ ಮೂಲಕ ಹರಿದು ಹೋಗುತ್ತಿತ್ತು. ಆದರೆ, ಇದೀಗ ನೆರೆಯ ವಿನೋದ್ ಎಂಬವರು ನೀರು ಹರಿಯುವುದನ್ನು ತಡೆಯುವಂತೆ ಮಣ್ಣು ತುಂಬಿಸಿದ್ದರಿಂದ ಎಲ್ಲಾ ಕಡೆಯ ನೀರು ತಗ್ಗು ಪ್ರದೇಶದಲ್ಲಿರುವ ತಮ್ಮ ತೋಟಕ್ಕೆ ನುಗ್ಗುತ್ತಿದೆ. ಇದರಿಂದ ತಮ್ಮ ಐದು ಎಕರೆ ಭೂಮಿಯಲ್ಲಿರುವ 700ಕ್ಕೂ ಅಧಿಕ ಅಡಿಕೆ ಮರ, 150ಕ್ಕೂ ಮಿಕ್ಕಿದ ತೆಂಗಿನ ಮರಗಳು ನೀರು ಪಾಲಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಭೋಜ ಸಾಲ್ಯಾನ್ ಅಸಹಾಯಕತೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಗಣಪ ಸಾಲ್ಯಾನ್, ವಸಂತ ಪೂಜಾರಿ, ಡಾ.ಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News