×
Ad

`ಇ' ಫ್ರೆಂಡ್ಸ್ ವತಿಯಿಂದ ಇಫ್ತಾರ್ ಕೂಟ

Update: 2016-06-29 12:52 IST

ಪುತ್ತೂರು, ಜೂ.29: ಪುತ್ತೂರಿನ ವಾಟ್ಸ್ ಆಪ್ `ಇ' ಫ್ರೆಂಡ್ಸ್ ವತಿಯಿಂದ ಜೂ.26ರಂದು ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯಲ್ಲಿ ಇಫ್ತಾರ್ ಕೂಟ ನಡೆಯಿತು. ಸುಮಾರು 850ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 

ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್. ಬಿ. ಮುಹಮ್ಮದ್ ದಾರಿಮಿ ದುವಾ ನೆರವೇರಿಸಿದರು. ದ.ಕ.ಜಿಲ್ಲಾ ವಕ್ಫ್ ಬೋಡರ್್ ಸದಸ್ಯ ಪಿ.ಬಿ. ಹಸನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. 

ಬಪ್ಪಳಿಗೆ ಮಸೀದಿ ಖತೀಬ್ ಸಿರಾಜುದ್ದೀನ್ ಫೈಝಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪಿಎಫ್ಐ ಮುಖಂಡ ಶಾಫಿ ಬೆಳ್ಳಾರೆ, ಪುತ್ತೂರು ನಗರಸಭೆ ಸದಸ್ಯ ಮಹಮ್ಮದ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಶದ್ ದರ್ಬೆ ಮತ್ತಿತತರು ಉಪಸ್ಥಿತರಿದ್ದರು. 
 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News