ಮಂಗಳೂರು: ಮನೆಗಳಿಗೆ ಮರಬಿದ್ದು ಹಾನಿ
Update: 2016-06-29 14:38 IST
ಮಂಗಳೂರು, ಜೂ.29: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಜೆಪ್ಪು ಮಹಾಕಾಳಿ ಪಡ್ಪುವಿನ ಕೆಲವು ಮನೆಗಳಿಗೆ ಹಾನಿಯಾಗಿದೆ.ರಾತ್ರಿ 12 ಗಂಟೆಯ ಸುಮಾರಿಗೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಮರ ಬಿದ್ದು 2 ಮನೆಗಳಿಗೆ ಹಾನಿಯಾಗಿದೆ. ಜೆಪ್ಪು ಮಹಾಕಾಳಿಪಡ್ಪುವಿನ ಅನಿಲ್ ಕುಮಾರ್ ಎಂಬವರಿಗೆ ಸೇರಿದ ಮನೆಗೆ ಹಲಸಿನ ಮರದ ಕೊಂಬೆ ಬಿದ್ದು ಮನೆಯ ಹಂಚುಗಳು ಒಡೆದು ಹಾನಿಯಾಗಿದೆ. ಜೆಪ್ಪು ಕೊಪ್ಪರಿಗೆ ರಸ್ತೆಯ ವಿಶ್ವನಾಥ ಎಂಬವರಿಗೆ ಸೇರಿದ ಮನೆಯ ಮೇಲೂ ಮರ ಬಿದ್ದು ತಗಡು ಛಾವಣಿ ಒಡೆದು ಹೋಗಿದೆ. ಭಾರಿ ಗಾಳಿಗೆ ಕೆಲವು ಮನೆಗಳ ಹಂಚುಗಳು ಹಾರಿಹೋಗಿದೆ. ಮನೆಗಳ ಮೇಲೆ ಬಿದ್ದ ಮರವನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ತೆರವುಗೊಳಿಸಿದರು.