×
Ad

ತುಂಬೆ : ಖಾಸಗಿ ಬಸ್ ಢಿಕ್ಕಿ : ಪಾದಾಚಾರಿ ಸ್ಥಳದಲ್ಲೇ ಸಾವು

Update: 2016-06-29 15:04 IST

ಬಂಟ್ವಾಳ, ಜೂ.29: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯೊಬ್ಬರಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಂಬೆ ಸಮೀಪದ ವಳವೂರು ಮುಈನಾಬಾದ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ 2:30ರ ವೇಳೆಗೆ ಸಂಭವಿಸಿದೆ.

ಮೃತರನ್ನು ತುಂಬೆ ಗ್ರಾಮದ ಪೆರ್ಲಬೈಲ್ ನಿವಾಸಿ ಸೀನಾ(55) ಎಂದು ಗುರುತಿಸಲಾಗಿದೆ.

ಮೃತರು ಮುಈನಾಬಾದ್ ನಿಂದ ತುಂಬೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಬಿ.ಸಿ.ರೋಡಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಅರುಣ್ ಹೆಸರಿನ ಖಾಸಗಿ ಬಸ್ ಶರ ವೇಗದಲ್ಲಿ ಬಂದು ಢಿಕ್ಕಿ ಹೊಡೆದಿದೆ. ತೀವ್ರ ಸ್ವರೂಪದ ಗಾಯಗೊಂಡ ಸೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಬಸ್ ಚಾಲಕ ಹಾಗೂ ಕ್ಲೀನರ್ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಬಂಟ್ವಾಳ ಶವಗಾರಕ್ಕೆ ಸಾಗಿಸಲಾಗಿದೆ.

ಬಸ್ ಚಾಲಕನ ಮಿತಿ ಮೀರಿದ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News