ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ ಪಿ.ಕೆ. ಮಾಧವನ್ ನಂಬಿಯಾರ್ ನಿಧನ
Update: 2016-06-29 19:16 IST
ಕಾಸರಗೋಡು, ಜೂ.29: ಹಿರಿಯ ಸ್ವಾತಂತ್ರ ಹೋರಾಟಗಾರ, ಗಾಂಧಿವಾದಿ ಪಿ.ಕೆ. ಮಾಧವನ್ ನಂಬಿಯಾರ್ (88) ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಲ್ಲಿನ ಮುಳ್ಳೇರಿಯಾ ಗಾಂಧೀನಗರ ನಿವಾಸಿಯಾಗಿದ್ದ ನಂಬಿಯಾರ್‌ರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಯ್ಯನ್ನೂರಿನಲ್ಲಿ ಜನಿಸಿದ್ದ ನಂಬಿಯಾರ್ ಅವರು ಸಹೋದರ ಪಿ.ಕೆ. ಗೋಪಾಲಕೃಷ್ಣನ್‌ರ ಜೊತೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1942 ರಲ್ಲಿ ಜೈಲು ವಾಸ ಅನುಭವಿಸಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.