×
Ad

ಏಳನೇ ವರ್ಷಕ್ಕೆ ಕಾಲಿಟ್ಟ ಖೈರಿಯಾ ಶೆಲ್ಟರ್

Update: 2016-06-29 19:31 IST

ದ.ಕ. ಜಿಲ್ಲೆಯ  ಮಂಗಳೂರು ತಾಲೂಕಿನ ತೊಕ್ಕೊಟ್ಟು ಸಮೀಪದ ಖೈರಿಯಾ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಖೈರಿಯಾ ಶೆಲ್ಟರ್  ದ.ಕ. ಜಿಲ್ಲೆಯಲ್ಲೇ ಪ್ರಥಮ ಅನಾಥ ಮತ್ತು ಬಡ ಹೆಣ್ಣು ಮಕ್ಕಳ ಹಾಸ್ಟೆಲ್ ಈಗ ಏಳನೆ ವರ್ಷದ ಸಂಭ್ರಮದಲ್ಲಿದೆ. ಟ್ರಸ್ಟ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿಯವರ ಉಸ್ತುವಾರಿಯಲ್ಲಿ ನಡೆಯುತ್ತಿರುವ ಖೈರಿಯಾ ಶೆಲ್ಟರ್‌ನಲ್ಲಿ ಆಶ್ರಯ ಪಡೆದಿರುವ ಅನಾಥ(ಯತೀಂ) ಹಾಗೂ ಬಡ ಹೆಣ್ಣು ಮಕ್ಕಳಿಗೆ ಊಟ, ವಸತಿ ಸಹಿತ ಗುಣಮಟ್ಟದ ಉಚಿತ ಶಿಕ್ಷಣದ ವ್ಯವಸ್ಥೆಯನ್ನೂ ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

2008ರ ಜನವರಿಯಲ್ಲಿ ಬಿ.ಅಬ್ದುಲ್ಲಾ ಕುಂಞಿ ಅವರು ದಾನವಾಗಿ ನೀಡಿರುವ 81 ಸೆಂಟ್ಸ್ ಜಾಗದಲ್ಲಿ ಇತರ ಟ್ರಸ್ಟಿಗಳು ತಮ್ಮ ಸ್ವಂತ ಖರ್ಚಿನಿಂದ ನೆಲ ಮತ್ತು ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಇದೀಗ 86 ಬಡ ಮತ್ತು ಅನಾಥ ಹೆಣ್ಣು ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಇವರಿಗೆ ಉಚಿತ ವಸತಿ, ಉಟೋಪಚಾರ ಮಾತ್ರವಲ್ಲದೆ ಧಾರ್ಮಿಕ ಶಿಕ್ಷಣದ ಸಹಿತ ಎಲ್.ಕೆ.ಜಿ ಯಿಂದ ಡಿಗ್ರಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಲೌಕಿಕ ಶಿಕ್ಷಣದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ, ಇನ್ನಿತರ ಖರ್ಚು ವೆಚ್ಚಗಳನ್ನು ದಾನಿಗಳ ಸಹಕಾರದಿಂದ ಹಾಗೂ ಖೈರಿಯಾ ಟ್ರಸ್ಟ್‌ನ 14 ಮಂದಿ ಪದಾಧಿಕಾರಿಗಳ ಸಹಿತ ಟ್ರಸ್ಟಿಗಳು ಭರಿಸುತ್ತಿದ್ದಾರೆ ಎಂದು ರಶೀದ್ ಹಾಜಿಯವರು ತಿಳಿಸಿದ್ದಾರೆ.

2014-15 ರ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದ 13 ವಿದ್ಯಾರ್ಥಿನಿಗಳಲ್ಲಿ 13 ವಿದ್ಯಾರ್ಥಿನಿಗಳು ವಿಶಿಷ್ಟ ಮತ್ತು ಪ್ರಧಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿ.ಯು.ಸಿ ಪರೀಕ್ಷೆ ಬರೆದ 8 ವಿದ್ಯಾರ್ಥಿನಿಗಳಲ್ಲಿ 8 ವಿದ್ಯಾರ್ಥಿನಿಗಳು ವಿಶಿಷ್ಟ ಮತ್ತು ಪ್ರಧಮ ದರ್ಜೆಯಲ್ಲಿ ಉತ್ತೀರ್ಣಾರಾಗಿದ್ದಾರೆ.

ಪ್ರಸಕ್ತ 2015-16ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆದ 13 ವಿದ್ಯಾರ್ಥಿನಿಯರಲ್ಲಿ 11 ಮಂದಿ ಉತ್ತೀರ್ಣರಾಗಿದ್ದಾರೆ, ಪಿ.ಯು.ಸಿ ಪರೀಕ್ಷೆ ಬರೆದ 7 ವಿದ್ಯಾರ್ಥಿನಿಯರಲ್ಲಿ 5 ಮಂದಿ ವಿಶಿಷ್ಟ ಮತ್ತು ಪ್ರಧಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರತೀ ವರ್ಷ ಖೈರಿಯಾ ಶೆಲ್ಟರ್‌ಗೆ ಪ್ರವೇಶ ಬಯಸಿ ಅನಾಥ ಹಾಗೂ ಬಡ ವಿದ್ಯಾರ್ಥಿಗಳಿಂದ ಹಲವು ಅರ್ಜಿಗಳು ಬರುತ್ತಿದ್ದು, ಈ ಪೈಕಿ ನಾವು ಅನಾಥ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡುತ್ತಿದ್ದೇವೆ. ಅನಂತರದ ಪ್ರಾಶಸ್ತ್ಯವನ್ನು ಬಡ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದೇವೆ. ಎಲ್‌ಕೆಜಿ ಯಿಂದ ವಿದ್ಯಾಭ್ಯಾಸವನ್ನು ಪಡೆಯಲಿಚ್ಛಿಸುವ ಅನಾಥ ಹಾಗೂ ಬಡ ಮಕ್ಕಳನ್ನೂ ಸ್ವೀಕರಿಸಿದ್ದು, ಈಗಾಗಲೇ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿನಿಯರಿಗೂ ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಅರೆಬಿಕ್, ಹಿಫ್ಲ್ ಸಹಿತ ಧಾರ್ಮಿಕ ವಿದ್ಯಾಭ್ಯಾಸವನ್ನೂ ನೀಡುತ್ತಿದ್ದೇವೆ. ಅರೆಬಿಕ್, ಹಿಫ್ಲ್ ,ಟ್ಯೂಷನ್ ಉಪನ್ಯಾಸಕರು, ಇಬ್ಬರು ಅಡುಗೆಯವರು, ಆಯಾ, ಕ್ಲೀನರ್, ವಾರ್ಡನ್, ವಾಚ್‌ಮ್ಯಾನ್, ವ್ಯವಸ್ಥಾಪಕ ಸಹಿತ 10 ಮಂದಿ ಸಿಬ್ಬಂದಿಗಳು ಖೈರಿಯಾ ಶೆಲ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟು ತಿಂಗಳಿಗೆ 2.6 ಲಕ್ಷ ರೂ. ಖರ್ಚು ಬರುತ್ತಿವೆ. ಈ ಖರ್ಚುಗಳನ್ನು ದಾನಿಗಳು, ಟ್ರಸ್ಟಿಗಳು ಭರಿಸುತ್ತಿದ್ದು, ಖೈರಿಯಾ ಶೆಲ್ಟರ್‌ನ್ನು ಮುಂದುವರಿಸಲು ದಾನಿಗಳಿಂದ ಇನ್ನೂ ಹೆಚ್ಚಿನ ನೆರವನ್ನು ಬಯಸುವುದಾಗಿ ರಶೀದ್ ಹಾಜಿ ತಿಳಿಸಿದರು.

ಖೈರಿಯಾ ಶೆಲ್ಟರ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ದತ್ತು ಸ್ವೀಕರಿಸಬಹುದು ಅಥವಾ ಪ್ರತಿ ವಿದ್ಯಾರ್ಥಿನಿಗೆ ತಗಲುವ ಮಾಸಿಕ 3,000 ರೂ. ಖರ್ಚನ್ನು ದಾನಿಗಳು ಭರಿಸಲು ಅವಕಾಶವಿದೆ. ಸಹಾಯ ಮಾಡಲಿಚ್ಛಿಸುವ ದಾನಿಗಳು ಈ ಕೆಳಕಂಡ ವಿಳಾಸ ಅಥವಾ ಇ-ಮೇಲ್‌ನ್ನು ಸಂಪರ್ಕಿಸಬಹುದು. ಖೈರಿಯಾ ಟ್ರಸ್ಟ್, ವಿಶ್ವವಿದ್ಯಾನಿಲಯ ರಸ್ತೆ, ಬಬ್ಬುಕಟ್ಟೆ, ಪೆರ್ಮನ್ನೂರು, ಮಂಗಳೂರು. ಜಾಲತಾಣ www.khairiyatrust.org  ನ್ನು ಸಂಪರ್ಕಿಸಬಹುದು. ಆರ್ಥಿಕ ಸಹಾಯ ಮಾಡಲಿಚ್ಛಿಸುವವರು KHAIRIYA TRUST (R), CORPORATION BANK, PANDESHWARA, A/C NO. SB/010/43980, IFSC - CORP0000133 ಖಾತೆಗೆ ಹಣ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ 9844077273, 0824-2014275.

ಖೈರಿಯಾ ಟ್ರಸ್ಟ್ ನ ಟ್ರಸ್ಟಿಗಳು:
ಎಸ್.ಎಂ.ರಶೀದ್ ಹಾಜಿ (ಅಧ್ಯಕ್ಷ), ಡಾ.ಪಿ.ಎಸ್.ಎಂ.ಅಮೀರ್ ಅಲಿ, ಕೆ.ಹೈದರ್ ಹಾಜಿ (ಉಪಾಧ್ಯಕ್ಷ), ಇಮ್ತಿಯಾಝ್ ಜಿ.ಎ.(ಕಾರ್ಯದರ್ಶಿ), ರಿಯಾಝ್ ಬಾವ, ಅಬೂಬಕರ್ ಸಿದ್ದೀಕ್ (ಜೊತೆ ಕಾರ್ಯದರ್ಶಿಗಳು), ಬಿ.ಎಸ್.ಮುಹಮ್ಮದ್ ಬಶೀರ್ (ಖಜಾಂಚಿ), ನ್ಯಾಯವಾದಿ ಅಬ್ದುಲ್ ಅಝೀಝ್ (ಕಾನೂನು ಸಲಹೆಗಾರ), ಹಾಜಿ ಬಿ.ಅಬ್ದುಲ್ಲಾ ಕುಂಞಿ, ಮನ್ಸೂರ್ ಅಹ್ಮದ್, ಎಂ.ಮಜೀದ್, ಅಶ್ರಫ್, ಅಲ್ತಾಫ್ ಹುಸೈನ್ ಅಬುಧಾಬಿ, ಖಾಸಿಂ ಅಹ್ಮದ್ ಎಚ್.ಕೆ. ದುಬೈ (ಟ್ರಸ್ಟಿಗಳು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News