×
Ad

ಜು.29ರಂದು ಹಾಜರಾಗಲು ವಿಜಯ್ ಮಲ್ಯಗೆ ಮುಂಬೈ ಕೋರ್ಟ್ ಆದೇಶ

Update: 2016-06-29 20:21 IST

ಹೊಸದಿಲ್ಲಿ, ಜೂ.29: ಕಪ್ಪು ಹಣವನ್ನು ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಜುಲೈ 29ರಂದು ನ್ಯಾಯಾಲಯದ ತನ್ನ ಮುಂದೆ ಹಾಜರಾಗುವಂತೆ ಮುಂಬೈಯ ವಿಶೇಷ ನ್ಯಾಯಾಲಯ ಬುಧವಾರ ಮದ್ಯ ದೊರೆ ವಿಜಯ್ ಮಲ್ಯ ಅವರಿಗೆ ಆದೇಶಿಸಿದೆ.

ಪ್ರಸ್ತುತ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ಪಿ.ಆರ್.ಭಾವಕೆ ಅವರು ಆದೇಶ ನೀಡಿದ್ದಾರೆ.

    2002ರ ಕಪ್ಪುಹಣ ಬಿಳುಪುಗೊಳಿಸುವಿಕೆ ತಡೆ ಕಾಯ್ದೆಯಡಿ ಶಿಕ್ಷಾರ್ಹವೆನಿಸುವಂತಹ ಅಪರಾಧವನ್ನು ಮಲ್ಯ ಎಸಗಿದ್ದಾರೆಂದು ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ವಿರುದ್ಧದ ಬಂಧನ ವಾರಂಟನ್ನು ದಕ್ಷಿಣ ಮುಂಬೈಯ ಕಿಂಗ್‌ಫಿಶರ್ ಏರ್‌ಲೈನ್ಸ್ ಕಚೇರಿಯ ವಿಳಾಸಕ್ಕೆ ಕಳುಹಿಸಲಾಗಿತ್ತಾದರೂ, ಅವರ ಅನುಪಸ್ಥಿತಿಯಿಂದಾಗಿ ಅದನ್ನು ಅವರಿಗೆ ಹಸ್ತಾಂತರಿಸಲು ಸಾಧ್ಯವಾಗಿಲ್ಲ. 60 ವರ್ಷದ ವಿಜಯ್ ಮಲ್ಯ, ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಮರುಪಾವತಿಸದೆ ಮಾರ್ಚ್ 2ರಂದು ವಿದೇಶಕ್ಕೆ ಪರಾರಿಯಾಗಿದ್ದರು. ಪ್ರಸ್ತುತ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News