ಕಲ್ಲಡ್ಕ ಪ್ರಭಾಕರ್ ಭಟ್ಟರ ವಿದ್ಯಾಕೇಂದ್ರಕ್ಕೆ ಅನುಪಮಾ ಶೆಣೈ ಭೇಟಿ

Update: 2016-06-29 16:30 GMT

ಬಂಟ್ವಾಳ, ಜೂ. 29: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಬಳ್ಳಾರಿಯ ಮಾಜಿ ಡಿವೈಎಸ್ಪಿಅನುಪಮಾ ಶೆಣೈ, ರಾಮ ಮಂದಿರ, ಶಿಶುಮಂದಿರ, ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲವು ಹೊತ್ತು ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಭಾರತವನ್ನು ಭ್ರಷ್ಟಚಾರ ಮುಕ್ತವನ್ನಾಗಿಸಲು ವಿದ್ಯಾರ್ಥಿಗಳು ಬದ್ಧರಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ಭ್ರಷ್ಟಾಚಾರ ಮಟ್ಟ ಹಾಕಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಾರತ ಬಲಿಷ್ಠವಾಗಿ ಬೆಳೆಯಬೇಕಾದರೆ ಇಲ್ಲಿನ ಮಾನವ ಸಂಪನ್ಮೂಲ ದೇಶೀಯ ಸಂಸ್ಕೃತಿಯೊಂದಿಗೆ ಬೆರೆತು ಸದ್ಬಳಕೆಯಾಗಬೇಕು. ವಿದ್ಯಾ ಕೇಂದ್ರಗಳು ದೇಶೀಯ ಪದ್ಧತಿಯನ್ನು ಅನುಸರಿಸಬೇಕಿದೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಷ್ಟಾಚಾರವನ್ನು ಮಟ್ಟ ಹಾಕುವ ರಣತಂತ್ರವನ್ನು ಕಲಿಸಿಕೊಡಬೇಕು. ಆಗ ಮಾತ್ರ ಬಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸಾಧ್ಯ ಎಂದು ಭಾವುಕರಾಗಿ ನುಡಿದಿದ್ದಾರೆ.

ವಿದ್ಯಾಕೇಂದ್ರದ ಅಭಿವೃದ್ಧಿ ವಿಚಾರದಲ್ಲೂ ಸಂಚಾಲಕರೊಂದಿಗೆ ಚರ್ಚಿಸಿ, ಶ್ಲಾಘನೆ ವ್ಯಕ್ತಪಡಿಸಿದರು. ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ್ ಟ್, ಕಮಲಾ ಪ್ರಭಾಕರ್ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News