ಮಂಗಳೂರು: ದರೋಡೆಗೆ ಯತ್ನಿಸುತ್ತಿದ್ದ ಇಬ್ಬರ ಸೆರೆ
Update: 2016-06-29 22:16 IST
ಮಂಗಳೂರು, ಜೂ.29:ಮಾರಾಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸುತ್ತಿದ್ದ ಇಬ್ಬರನ್ನು ನಗರದ ಕೋಡಿಕಲ್‌ರಸ್ತೆಯ ಬಳಿ ಉರ್ವ ಪೊಲೀಸರು ಬಂಧಿಸಿದ್ದಾರೆ.
ಚಿಲಿಂಬಿಯ ರಕ್ಷಿತ್ (21) ಹಾಗೂ ಅಶೋಕನಗರದ ಸುಹಾನ್‌ರಾಜ್ (20)ರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಎರಡೂ ಚೂರಿ ಹಾಗೂ ಒಂದು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ರಕ್ಷಿತ್ ಹಾಗೂ ಸುಹಾನ್‌ರಾಜ್ ಸೇರಿ ಒಟ್ಟು 5 ಜನ ಆರೋಪಿಗಳು ದರೋಡೆಗೆ ಯತ್ನಿಸಿದಾಗ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 3 ಆರೋಪಿಗಳು ಪರಾರಿಯಾಗಿದ್ದಾರೆ.