×
Ad

ಗಾಂಜಾ ಸೇವನೆ ಆರೋಪ: ಓರ್ವನ ಬಂಧನ

Update: 2016-06-29 22:16 IST

ಮಂಗಳೂರು,ಜೂ.29: ನಗರದ ಕುದ್ರೋಳಿಯ ಜೋಡುಪಳ್ಳಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಡಿಯಲ್ಲಿ ಬಂದರು ಠಾಣಾ ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

 ಕುದ್ರೋಳಿಯ ಪಹದ್ (19) ಎಂಬವನನ್ನು ಬಂಧಿಸಲಾಗಿದ್ದು , ಈತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆಗೈದಿರುವುದು ದೃಢಪಟ್ಟಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News