ಝಿಕಾ ವೈರಸ್ ಹತ್ತಿಕ್ಕಲು ಸೂಕ್ತ ಕ್ರಮ: ಐಒಎ

Update: 2016-06-29 17:33 GMT

ಹೊಸದಿಲ್ಲಿ, ಜೂ.29: ಝಿಕಾ ವೈರಸ್ ಭೀತಿಯಿಂದ ವಿಶ್ವದಾದ್ಯಂತದ ಅಥ್ಲೀಟ್‌ಗಳು ರಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುತ್ತಿದ್ದಾರೆ. ನಾವು ಸಂಭಾವ್ಯ ಅಪಾಯವನ್ನು ಹತ್ತಿಕ್ಕಲು ಎಲ್ಲ ಹೆಜ್ಜೆಗಳನ್ನು ಇಡಲಿದ್ದೇವೆ ಎಂದು ಭಾರತೀಯ ಒಲಿಂಪಿಕ್ಸ್ ತಂಡದ ಚೀಪ್ ಡಿ ಮಿಶನ್ ರಾಕೇಶ್ ಗುಪ್ತಾ ಹೇಳಿದ್ದಾರೆ.

  ನಾವೆಲ್ಲರೂ ಝಿಕಾ ವೈರಸ್ ಬಗ್ಗೆ ಚಿಂತಿತರಾಗಿದ್ದೇವೆ. ರಿಯೋ ಗೇಮ್ಸ್‌ಗೆ ತೆರಳಲಿರುವ ಭಾರತೀಯ ಅಥ್ಲೀಟ್ ತಂಡಗಳ ಬಗ್ಗೆ ನಾವು ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದ್ದೇವೆ. ಅಂತಾರಾಷ್ಟ್ರೀಯ ಅಥ್ಲೀಟ್ ಸಂಸ್ಥೆಯಿಂದ ನಾವು ಪಡೆದಿರುವ ಸಲಹೆ-ಸೂಚನೆಯನ್ನು ಆಟಗಾರರಿಗೆ ಹಾಗೂ ಫೆಡರೇಶನ್‌ಗೆ ಕಳುಹಿಸಿಕೊಡಲಿದ್ದೇವೆ ಎಂದು ಗುಪ್ತಾ ತಿಳಿಸಿದ್ದಾರೆ.

ನಾವು ಅಥ್ಲೀಟ್‌ಗಳಿಗೆ ಕೆಲವು ಔಷಧಿಗಳನ್ನು ನೀಡಲಿದ್ದು, ಅದು ಬ್ರೆಝಿಲ್‌ನಲ್ಲಿ ಪ್ರಯೋಜನಕ್ಕೆ ಬರಲಿದೆ. ಆಟಗಾರರಿಗೆ ಪೂರ್ಣ ತೋಳಿನ ಟೀ-ಶಟ್‌ಗಳನ್ನು ನೀಡಲಿದ್ದೇವೆ. ಈ ತನಕ ನಮ್ಮ ಯಾವ ಅಥ್ಲೀಟ್‌ಗಳು ಝಿಕಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿಲ್ಲ. ಒಲಿಂಪಿಕ್ಸ್ ಆರಂಭವಾಗುವ ವೇಳೆಗೆ ಎಲ್ಲ ಸಮಸ್ಯೆಯೂ ಪರಿಹಾರ ಕಾಣುವ ವಿಶ್ವಾಸವಿದೆ ಎಂದು ಗುಪ್ತಾ ಹೇಳಿದ್ದಾರೆ.

ಝಿಕಾ ವೈರಸ್ ಭೀತಿ: ಗೇಮ್ಸ್‌ನಿಂದ ಅಥ್ಲೀಟ್‌ಗಳ ಹಿಂಜರಿಕೆಯಲ್ಲಿ ಹೆಚ್ಚಳ

ಹೊಸದಿಲ್ಲಿ,ಜೂ.29: ಈ ವರ್ಷದ ಒಲಿಂಪಿಕ್ ಗೇಮ್ಸ್‌ನ ಆತಿಥ್ಯ ವಹಿಸಿಕೊಂಡಿರುವ ಬ್ರೆಝಿಲ್‌ನಲ್ಲಿ ಝಿಕಾ ವೈರಸ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಗೇಮ್ಸ್‌ನಿಂದ ಹಿಂದೆ ಸರಿದ ಅಥ್ಲೀಟ್‌ಗಳ ಸಂಖ್ಯೆ 9ಕ್ಕೆ ಏರಿದೆ.

ಒಲಿಂಪಿಕ್ಸ್ ಆರಂಭವಾಗಲು ಇನ್ನು ಒಂದು ತಿಂಗಳು ಬಾಕಿ ಇರುವಾಗ ಗಾಲ್ಫರ್‌ಗಳಾದ ಜಾಸನ್ ಡೇ ಹಾಗೂ ಶೇನ್ ಲೌರಿ ಝಿಕಾ ವೈರಸ್ ಭಯವನ್ನು ಮುಂದಿಟ್ಟು ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ.

ಝಿಕಾ ವೈರಸ್‌ನಿಂದ ಗರ್ಭಿಣಿ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮಬೀರಲಿದ್ದು, ಜನಿಸುವ ಮಕ್ಕಳ ಮೆದುಳು ಬೆಳವಣಿಯಾಗಿರುವುದಿಲ್ಲ.

ಝಿಕಾ ವೈರಸ್ ಪೀಡಿತ ವ್ಯಕ್ತಿಗೆ ಜ್ವರ, ಚರ್ಮದ ತುರಿಕೆ, ಮಾಂಸಖಂಡ ನೋವು, ಗಂಟು ನೋವು, ತಲೆ ನೋವುಗಳಂತಹ ಲಕ್ಷಣವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News