×
Ad

ಜೈಲಿನ ಕೋಣೆಯಿಂದ ಐಐಟಿಗೆ!

Update: 2016-06-29 23:04 IST

ಕೋಟಾ, ಜೂ.29: ಕಳೆದ ಎರಡು ವರ್ಷಗಳಿಂದ ಪಿಯುಷ್ ಗೋಯಲ್ ಇಂಜಿನಿಯರಿಂಗ್ ಕೋರ್ಸ್ ಸೇರಬೇಕೆಂಬ ಮಹದಾಸೆಯಿಂದ ಬಹಳಷ್ಟು ಶ್ರಮ ವಹಿಸಿ ಓದುತ್ತಿದ್ದ. ಆತನಿಗೂ ಇತರ ವಿದ್ಯಾರ್ಥಿಗಳಿಗೂ ಇದ್ದ ವ್ಯತ್ಯಾಸ ಒಂದೇ- ಆತ ತನ್ನ ತಂದೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೋಟಾದ ತೆರೆದ ಜೈಲಿನಲ್ಲಿದ್ದುಕೊಂಡು ಕಲಿಯುತ್ತಿದ್ದ. ಆತನ ಕೋಣೆ 8 ಅಡಿ ಉದ್ದ ಹಾಗೂ ಅಷ್ಟೇ ಅಡಿ ಅಗಲವಿತ್ತು ಹಾಗೂ ರಾತ್ರಿ 11 ಆಗುವುದರೊಳಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಪುಸ್ತಕಗಳಿಗೆ ಖರ್ಚು ಮಾಡಲು ಸಾಕಷ್ಟು ಹಣವಿರಲಿಲ್ಲ. ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪಿಯುಷ್ ತಂದೆ ಫೂಲ್ ಚಂದ್ ಗೋಯಲ್ ಬಳಿ ಸಾಕಷ್ಟು ಆರ್ಥಿಕ ಸಂಪನ್ಮೂಲವಿಲ್ಲದ ಕಾರಣ ಪಿಯುಷ್ ಕೂಡ ಹಾಸ್ಟೆಲ್ ಒಂದರಲ್ಲಿ ಉಳಿದು ಕಲಿಯುವುದು ಅಸಾಧ್ಯವಾಗಿತ್ತು. ಆದರೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 453ನೆ ರ್ಯಾಂಕ್ ಗಳಿಸಿ 18ರ ಹರೆಯದ ಪಿಯುಷ್ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾನೆ. ‘‘ಜೈಲು ಅಷ್ಟೊಂದೇನೂ ಕೆಟ್ಟದ್ದಾಗಿರಲಿಲ್ಲ. ನನ್ನ ತಂದೆಯ ಕನಸನ್ನು ನಾನು ಇಂದು ನನಸಾಗಿಸಿದ್ದೇನೆ. ಅವರು ಧೈರ್ಯ ತೋರಿ ನನ್ನನ್ನಿಲ್ಲಿರಿಸಿ ಓದಿಸಿದರು’’ ಎಂದು ಆತ ಹೇಳುತ್ತಾನೆ. ನನ್ನ 14 ವರ್ಷ ಜೈಲು ಶಿಕ್ಷೆ ಮುಕ್ತಾಯ ಹಂತದಲ್ಲಿರುವ ಫೂಲ್ ಚಂದ್ ಸದ್ಯ ತೆರೆದ ಜೈಲಿನಲ್ಲಿದ್ದು ಅಲ್ಲಿಂದ ಹೊರಗೆ ಕೆಲಸಕ್ಕೆ ಹೋಗಬಹುದಾಗಿದ್ದರೂ ಸಂಜೆ ಹೊತ್ತಿಗೆ ತನ್ನ ಸೆಲ್‌ಗೆ ಮರಳಬೇಕಾಗಿದೆ. ಆತನ ಪುತ್ರ ಪಿಯುಷ್ ಅಲ್ಲಿ ತಂದೆಯೊಂದಿಗೆ ಎರಡು ವರ್ಷಗಳಿಂದಿದ್ದಾನೆ. ನಗರದ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಆತನಿಗೆ ಸಿಗುತ್ತಿದ್ದ ರೂ. 12,000 ವೇತನದ ಸಹಾಯದಿಂದ ಪಿಯುಷ್ ಶಿಕ್ಷಣಕ್ಕೆ ಆತ ನೆರವು ನೀಡಿದ್ದ. ಆತನನ್ನು ಹಾಸ್ಟೆಲ್‌ಗೆ ಸೇರಿಸಲು ಅನನುಕೂಲವಾಗಿದ್ದರೂ ವೈಬ್ರೆಂಟ್ ಎಂಬ ಕೋಚಿಂಗ್ ಸಂಸ್ಥೆಗೆ ಆತನನ್ನು ಕಳುಹಿಸುತ್ತಿದ್ದ ತನ್ನ ಮಗನನ್ನು ಜೈಲಿನ ಅಧಿಕಾರಿಗಳು ಹಾಗೂ ಜೈಲಿನ ಸಿಬ್ಬಂದಿ ಉತ್ತೇಜಿಸುತ್ತಿದ್ದರು ಎಂದು ಫೂಲ್ ಚಂದ್ ಕೃತಜ್ಞತೆಯಿಂದ ನೆನಪಿಸುತ್ತಾನೆ.

ಪಿಯುಷ್ ಯಶಸ್ಸು ಜೈಲ್‌ನ ಸೂಪರಿಂಟೆಂಡೆಂಟ್ ಶಂಕರ್ ಸಿಂಗ್ ಅವರಿಗೂ ಸಂತಸ ತಂದಿದೆ. ನಾವು ತೆರೆದ ಜೈಲ್‌ನಲ್ಲಿರುವ ಕೈದಿಗಳಿಗೆ ಇನ್ನೂ ಉತ್ತಮ ಸೌಲಭ್ಯ ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News