×
Ad

ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ವೋಝ್ನಿಯಾಕಿ

Update: 2016-06-29 23:11 IST

ಲಂಡನ್, ಜೂ.29: ವಿಶ್ವದ ಮಾಜಿ ನಂ.1 ಆಟಗಾರ್ತಿ ಕಾರೊಲಿನ್ ವೋಝ್ನಿಯಾಕಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದಾರೆ. ಈ ಮೂಲಕ ಈ ಋತುವಿನಲ್ಲಿ ಒಂದೂ ಗ್ರಾನ್‌ಸ್ಲಾಮ್ ಪಂದ್ಯ ಜಯಿಸದೇ ನಿರ್ಗಮಿಸಿದ್ದಾರೆ.

8 ವರ್ಷಗಳಲ್ಲಿ ಇದೇ ಮೊದಲ ಬಾರಿ ಶ್ರೇಯಾಂಕವಿಲ್ಲದೆ ವಿಂಬಲ್ಡನ್ ಟೂರ್ನಿ ಆಡಿದ್ದ ಡೆನ್ಮಾರ್ಕ್‌ನ 25ರ ಹರೆಯದ ವೋಝ್ನಿಯಾಕಿ ಸ್ವೆತ್ಲಾನಾ ಕುಝ್ನೆಸೋವಾ ವಿರುದ್ಧ 7-5, 6-4 ಸೆಟ್‌ಗಳ ಅಂತರದಿಂದ ಶರಣಾದರು.

ವೋಝ್ನಿಯಾಕಿ ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ಮಂಡಿನೋವಿನ ಕಾರಣ ಫ್ರೆಂಚ್ ಓಪನ್‌ನಿಂದ ಹೊರ ಗುಳಿದಿದ್ದರು. ಈ ವರ್ಷ ಒಟ್ಟಾರೆ 11-11 ದಾಖಲೆ ಹೊಂದಿದ್ದಾರೆ.

 ವೋಝ್ನಿಯಾಕಿ 2010 ಹಾಗೂ 2011ರಲ್ಲಿ 67 ವಾರಗಳ ಕಾಲ ನಂ.1 ರ್ಯಾಂಕ್‌ನಲ್ಲಿದ್ದರು. ಎರಡು ಬಾರಿ ಗ್ರಾನ್‌ಸ್ಲಾಮ್ ಫೈನಲ್ ತಲುಪಿದ್ದರು. 2009 ಹಾಗೂ 2014ರ ಯುಎಸ್ ಓಪನ್‌ನಲ್ಲಿ ರನ್ನ್ರರ್-ಅಪ್‌ಗೆ ತೃಪ್ತಿಪಟ್ಟಿದ್ದರು.

10ನೆ ಬಾರಿ ವಿಂಬಲ್ಡನ್‌ನಲ್ಲಿ ಕಾಣಿಸಿಕೊಂಡಿದ್ದ ವೋಝ್ನಿಯಾಕಿ ಐದು ಬಾರಿ ನಾಲ್ಕನೆ ಸುತ್ತು ತಲುಪಿದ್ದರು. ಆದರೆ, ಕ್ವಾರ್ಟರ್‌ಫೈನಲ್‌ಗೆ ತಲುಪಲು ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News