ಪ್ರೊ ಕಬಡ್ಡಿ: ಜೈಪುರಕ್ಕೆ ಜಯ
Update: 2016-06-29 23:17 IST
ಜೈಪುರ, ಜೂ.29: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮಾಲಕತ್ವದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ.
ಬುಧವಾರ ಇಲ್ಲಿನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜೈಪುರ ತಂಡ ತೆಲುಗು ಟೈಟಾನ್ಸ್ ತಂಡವನ್ನು 28-24 ಅಂಕಗಳ ಅಂತರದಿಂದ ಮಣಿಸಿತು. ತನ್ನ ಎರಡನೆ ಪಂದ್ಯದಲ್ಲಿ ಎರಡು ಅಂಕದಿಂದ ಜಯ ಸಾಧಿಸಿತು.
ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರಟ್ಸ್ ತಂಡ ಯು ಮುಂಬಾ ತಂಡವನ್ನು 36-34 ಅಂಕಗಳ ಅಂತರದಿಂದ ಸೋಲಿಸಿತು.