ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಮೃತ್ಯು
Update: 2016-06-29 23:55 IST
ಕಾಸರಗೋಡು, ಜೂ.29: ಕಟ್ಟಡದ ಮೇಲಿನಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ಕಾಸರಗೋಡಿ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಕಾಸರಗೋಡು ಭಂಡಾರಮನೆ ಹಿತ್ತಿಲಿನ ಅಕ್ಷಯ್(20) ಎಂದು ಗುರುತಿಸಲಾಗಿದೆ. ಇವರು ಹಾಸನದ ಇಂಜಿನಿಯರಿಂಗ್ ಕಾಲೇಜಿನ ಎರಡನೆ ವರ್ಷದ ಆಟೊಮೊಬೈಲ್ ವಿದ್ಯಾರ್ಥಿಯಾಗಿದ್ದರು. ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ ಇವರು ಜೂನ್ 27ರಂದು ಪರೀಕ್ಷಾ ಫಲಿತಾಂಶ ನೋಡಲೆಂದು ಇಂಟರ್ನೆಟ್ ಕೆಫೆಗೆಂದು ಹೋದವರು ಸಂಜೆಯಾದರೂ ಮನೆಗೆ ಬಾರದೆ ಇದ್ದುದರಿಂದ ಮನೆಯವರು ವಿಚಾಸಿದಾಗ ಚೆರ್ಕಳದ ಕಟ್ಟಡವೊಂದರಿಂದ ಬಿದ್ದು ಗಾಯಗೊಂಡು ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವುದಾಗಿ ತಿಳಿದುಬಂತು. ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅಕ್ಷಯ್ ಬುಧವಾರ ಮೃತಪಟ್ಟರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.