×
Ad

ಡೆಂಗ್ ಜ್ವರಕ್ಕೆ ಯುವಕ ಬಲಿ

Update: 2016-06-29 23:56 IST

ಪುತ್ತೂರು, ಜೂ.29: ಕಳೆದ 15ದಿನಗಳ ಹಿಂದೆ ಜ್ವರ ಪೀಡಿತನಾಗಿದ್ದ ಯುವಕನೊಬ್ಬ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಡೆಂಗ್ ಜ್ವರದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪುತ್ತೂರು ತಾಲೂಕಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕ ನಿವಾಸಿ ನಿವೃತ್ತ ಶಿಕ್ಷಕ ಜನಾರ್ದನ ಗೌಡ ಅವರ ಪುತ್ರ ಲೋಹಿತ್ (29) ಮೃತಪಟ್ಟ ಯುವಕ. ಜ್ವರ ಪೀಡಿತರಾಗಿದ್ದ ಲೋಹಿತ್‌ರನ್ನು 15ದಿನಗಳ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 12ದಿನದ ಚಿಕಿತ್ಸೆಯ ಬಳಿಕ ಜ್ವರ ಕಡಿಮೆಯಾದ ಕಾರಣ ಕಳೆದ ಶನಿವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆ ದುಕೊಂಡು ಹೋಗಲಾಗಿತ್ತು. ಆದರೆ ಮರುದಿನ ವಿಪರೀತ ತಲೆ ಮತ್ತು ಕಾಲು ನೋವು ಕಾಣಿಸಿಕೊಂಡಿದ್ದ ಹಿನ್ನ್ನೆಲೆಯಲ್ಲಿ ಅವರ ಮನೆಯವರು ಲೋಹಿತ್ ಅವರನ್ನು ಕಾಣಿಯೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದ್ದರು. ವೈದ್ಯರ ಸಲಹೆಯಂತೆ ಲೋಹಿತ್‌ರನ್ನು ರವಿವಾರ ಮತ್ತೆ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ರೋಗ ಮತ್ತಷ್ಟು ಉಲ್ಬಣಿಸಿದ ಹಿನ್ನಲೆಯಲ್ಲಿ ಲೋಹಿತ್‌ರನ್ನು ಸೋಮವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಡೆಂಗ್ ಜ್ವರ ವಿಪರೀತಗೊಂಡು ತಲೆಗೇರಿದ ಪರಿಣಾಮವಾಗಿ ಲೋಹಿತ್ ಮೃತ ಪಟ್ಟಿರುವುದಾಗಿ ಕೆಎಂಸಿ ಆಸ್ಪತ್ರೆಯ ವೈದ್ಯರು ದೃಢಪಡಿಸಿರುವುದಾಗಿ ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News