ವೇಣೂರು: ಬೀಡಿ ಕಾರ್ಮಿಕರ ಸಮಾವೇಶ
Update: 2016-06-29 23:58 IST
ಬೆಳ್ತಂಗಡಿ, ಜೂ.29: ಕೇಂದ್ರದ ಬಿಜೆಪಿ ಸರಕಾರ ಬೀಡಿ ಉದ್ಯಮವನ್ನೇ ನಾಶ ಮಾಡಲು ಮುಂದಾಗಿ ಬೀಡಿ ಕಾರ್ಮಿಕರನ್ನು ಬೀದಿಪಾಲು ಮಾಡಲು ಹೊರಟರೆ, ರಾಜ್ಯದ ಕಾಂಗ್ರೆಸ್ ಸರಕಾರ ಮಾಲಕರ ಹಿತ ಕಾಪಾಡಲು ಮುಂದಾಗಿ, ಬೀಡಿ ಕಾರ್ಮಿಕರ ತುಟ್ಟಿಭತ್ತೆಯನ್ನೇ ಕಸಿದಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷ ಬಿ.ಎಂ.ಭಟ್ ಟೀಕಿಸಿದ್ದಾರೆ. ಅವರು ಇಂದು ವೇಣೂರು ವಲಯ ಬೀಡಿ ಕೆಲಸಗಾರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ವೇಣೂರಿನಲ್ಲಿ ನಡೆದ ಬೀಡಿ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಜಯರಾಮ ಮಯ್ಯ, ಜಯಂತಿ ನೆಲ್ಲಿಂಗೇರಿ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಲೋಕೇಶ್ ಕುದ್ಯಾಡಿ,