×
Ad

ಅಚ್ಯುತಾನಂದನ್‌ಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಲಿಕ್ಕಾಗಿ ಕಾನೂನು ತಿದ್ದುಪಡಿ ತರಲಿರುವ ಕೇರಳ ಸರಕಾರ

Update: 2016-06-30 11:39 IST

 ತಿರುವನಂತಪುರಂ, ಜೂನ್ 30: ವಿ.ಎಸ್ ಅಚ್ಯುತಾನಂದನ್ ಕ್ಯಾಬಿನೆಟ್ ರ್ಯಾಂಕ್‌ನ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಲಿದ್ದಾರೆ. ಆದಾಯಕರ ಸ್ಥಾನ ನೀಡಲಿಕ್ಕಾಗಿ ಕಾನೂನಿನಲ್ಲಿ ತಿದ್ದು ಪಡಿ ತಂದ ಬಳಿಕ ಇದಕ್ಕೆ ಅನುಮತಿ ನೀಡಲು ಸಚಿವಸಂಪುಟದ ಸಭೆ ತೀರ್ಮಾನಿಸಿದೆ. ಎರಡು ಹುದ್ದೆ ಎಂಬ ತಾಂತ್ರಿಕ ಬಲೆಯಲ್ಲಿ ಸಿಲುಕಿ ಕೊಳ್ಳದಿರಲು ಈ ತೀರ್ಮಾನವನ್ನು ಸಭೆಯಲ್ಲಿ ತಳೆಯಲಾಗಿದೆ. ಕಾನೂನು ತಿದ್ದುಪಡಿಗೆ ಅಗತ್ಯ ಕ್ರಮಗಳನ್ನು ಪೂರ್ತಿಗೊಳಿಸಲು ಮುಖ್ಯಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿಗಳಿಗೆ ಸಚಿವಸಂಪುಟದ ಸಭೆ ಜವಾಬ್ದಾರಿ ವಹಿಸಿದೆ.

 ವಿಧಾನಸಭೆಯ ಅಧಿವೇಶನದಲ್ಲಿಯೇ ಕಾನೂನು ತಿದ್ದುಪಡಿ ಪಾಸು ಮಾಡಲಿದ್ದು ಆದ್ದರಿಂದ ಅಚ್ಯುತಾನಂದನ್‌ರ ಹುದ್ದೆಯ ಕುರಿತು ಅಂತಿಮ ತೀರ್ಮಾನ ಮುಂದಿನ ತಿಂಗಳಾರ್ಧದಲ್ಲಿ ಹೊರಬರಲಿದೆ. ವಿಧಾನಸಭೆ ಅಧಿವೇಶನ ಇನ್ನು ಜುಲೈ ಎಂಟಕ್ಕೆ ಸೇರಲಿದೆ. ಆಯೋಗ ರೂಪುಗೊಳಿಸಲಿಕ್ಕೆ ಅವಶ್ಯ ವಿವರಗಳನ್ನು ಅಧ್ಯಯನಿಸಿ ವರದಿ ನೀಡಬೇಕೆಂದು ಇಬ್ಬರು ಕಾರ್ಯದರ್ಶಿಗಳಿಗೂ ಸೂಚನೆ ನೀಡಲಾಗಿದೆ. ಈ ಕುರಿತು ತೀರ್ಮಾನ ತೆಗೆಯುವ ಮೊದಲು ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲು ಸಾಧ್ಯವಿಲ್ಲದ ರೀತಿ ಹುದ್ದೆಯನ್ನು ಸುರಕ್ಷಿತಗೊಳಿಸುವ ಉದ್ದೇಶ ಸರಕಾರಕ್ಕಿದೆ. 1957ರಲ್ಲಿ ಇಎಂಸ್ ನಂಬುದಿರಿಪ್ಪಾಡ್, 1997ರಲ್ಲಿ ಇ.ಕೆ.ನಾಯನಾರ್ ಅಧ್ಯಕ್ಷತೆಯಲ್ಲಿ ಆಡಳಿತ ಸುಧಾರಣಾ ಆಯೋಗ ರಚಿಸಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News