ಬಂಟ್ವಾಳ: ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಫ್ತಾರ್ ಕೂಟ
Update: 2016-06-30 12:55 IST
ಬಂಟ್ವಾಳ, ಜೂ. 30: ಇಲ್ಲಿನ ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳ ವತಿಯಿಂದ ಶಾಲೆಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ಜುಮಾ ಮಸೀದಿಯ ಮುದರಿಸ್ ಅನ್ಸಾರ್ ಬುರ್ಹಾನಿ ಫೈಝಿ ದುಆ ನೆರವೇರಿಸಿ ಮಾತನಾಡಿ ಶುಭ ಹಾರೈಸಿದರು.
ಶಾಲಾ ಸಂಚಾಲಕ ಹಾಜಿ ಬಿ.ಮುಹಮ್ಮದ್ ಅಲಿ, ಕಾರ್ಯದರ್ಶಿ ಹಾಜಿ ಬಿ.ಎ.ಮುಹಮ್ಮದ್, ಕೋಶಾಧಿಕಾರಿ ಹಾಜಿ ಮುಹಮ್ಮದ್ ಸಾದಿಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪಿಟಿಎ ಅಧ್ಯಕ್ಷ ಬಿ.ಎಂ.ಇಲ್ಯಾಸ್, ಶಬೀರ್, ಮುಅಲ್ಲಿಮ್ಗಳು, ವಿದ್ಯಾರ್ಥಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು. ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಹರ್ ಮಾನಿ ಬಿ.ಎ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.