ತುಂಬೆ: ಕ್ರೆಸೆಂಟ್ ಯಂಗ್ ಮೆನ್ಸ್ ನಿಂದ ಇಫ್ತಾರ್ ಕೂಟ
Update: 2016-06-30 13:01 IST
ಬಂಟ್ವಾಳ, ಜೂ.30: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ಆಧೀನದಲ್ಲಿ 37 ವರ್ಷಗಳಿಂದ ಕಾರ್ಯಚರಿಸುತ್ತಿರುವ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸಂಘಟನೆಯಾದ ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿ ವರ್ಷದಂತೆ ರಮಝಾನ್ ತಿಂಗಳ ಎಲ್ಲಾ ದಿನಗಳಲ್ಲೂ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಯಿತು.
ಜಮಾಅತ್‌ನವರ ಸಹಕಾರದಿಂದ ನಡೆಸಲ್ಪಡುವ ಈ ಕಾರ್ಯಕ್ರಮಕ್ಕಾಗಿ ಸಂಘದ ಅಧ್ಯಕ್ಷ ಸಿರಾಜುದ್ದೀನ್, ಉಪಾಧ್ಯಕ್ಷ ಝಹೂರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಶೌಹಾನ್ ಹಾಗೂ ಸರ್ವ ಸದಸ್ಯರು ಶ್ರಮಿಸಿದ್ದಾರೆ.