×
Ad

ಮದರಸ ಪರೀಕ್ಷೆ: ಕುಂಜತ್ಕಳದ ನೂರುಲ್ ಹುದಾ ಮದ್ರಸಕ್ಕೆ 100 ಶೇ. ಫಲಿತಾಂಶ

Update: 2016-06-30 18:07 IST

ಮಂಗಳೂರು, ಜೂ. 30: ಸಮಸ್ತ ಕೇರಳ ಮತವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ. ಜಿಲ್ಲಾ ಮಟ್ಟದಲ್ಲಿ ಕುಂಜತ್ಕಳದ ನೂರುಲ್ ಹುದಾ ಮದ್ರಸವು ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದೆ.

ಅಬ್ದುರ್ರಝಾಕ್ ಅವರ ಪುತ್ರಿ ಮದ್ರಸದ 7ನೆ ತರಗತಿಯ ವಿದ್ಯಾರ್ಥಿನಿ ಸುಮಯ್ಯಾ ಬಾನು ದ್ವಿತೀಯ ಸ್ಥಾನ ಹಾಗೂ 5ನೆ ತರಗತಿಯ ಮುಹಮ್ಮದ್ ಹನೀಫ್ ಅವರ ಪುತ್ರ ಹಫೀಝುರ್ರಹ್ಮಾನ್ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಅಲ್ಲದೆ, ಮದ್ರಸವು ಶೇ. 100 ಫಲಿತಾಂಶ ಪಡೆದಿದ್ದು, ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನೂರುಲ್ ಹುದಾ ಮದ್ರಸದ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News