×
Ad

ಮುಲ್ಕಿ: ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್‌ರಿಗೆ ಬೀಳ್ಕೊಡುಗೆ

Update: 2016-06-30 19:02 IST

ಮಂಗಳೂರು,ಜೂ.30: ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿಗೆ ವರ್ಗಾವಣೆಗೊಂಡಿರುವ ಮುಲ್ಕಿ ಶಾಖೆಯ ಮ್ಯಾನೇಜರ್ ಮಂಜುನಾಥ ಕೆ.ವಿ ಯವರಿಗೆ ಇತ್ತೀಚೆಗೆ ಮುಲ್ಕಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಬ್ಯಾಂಕ್ ಗ್ರಾಹಕರು ಬೀಳ್ಕೊಡುಗೆ ಸಮಾರಂಭದ ಮೂಲಕ ಅಭಿನಂದಿಸಿದರು.

ಇದೇ ವೇಳೆ ಬ್ಯಾಂಕಿಗೆ ನೂತನ ಮ್ಯಾನೇಜರ್ ಆಗಿ ನೇಮಕವಾದ ನೀತಾ ಭಂಡಾರ್‌ಕರ್ ಅವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಕಾನೂನು ಸಲಹೆಗಾರ ಡೇನಿಯಲ್ ದೇವರಾಜ್ ನೋಟರಿ, ಪ್ರೊ. ಸ್ಯಾಮ್ ಮಾಬೆನ್, ಪ್ರಮೋದಾ, ರಂಜಿನಿ, ಆಶಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News