ಕಾರವಾರ: ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಮೃತ್ಯು
Update: 2016-06-30 19:16 IST
ಕಾರವಾರ, ಜೂ.30: ಮುಂಡಗೋಡ ತಾಲೂಕಿಗೆ ದಲೈಲಾಮಾ ಆಗಮನ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಕ್ಕೆ ಅಲಂಕಾರಿಕ ಧ್ವಜ ಕಟ್ಟುತ್ತಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಮುಂಡಗೋಡ ಟಿಬೆಟಿಯನ್ ಕ್ಯಾಂಪಿನ ಸುಲ್ಟ್ರೀಮ್ ಲೋಪಸಾಂಗ್ ಚಾಪೇಲ್(34) ಮೃತಪಟ್ಟ ವ್ಯಕ್ತಿ. ಇವರು ಕಬ್ಬಿಣದ ಕಂಬಕ್ಕೆ ಧ್ವಜ ಕಟ್ಟುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಕಂಬದಲ್ಲಿ ವಿದ್ಯುತ್ ಪ್ರವಹಿಸಿದ್ದು, ವಿದ್ಯುದಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.