×
Ad

ಇಂದು ವೇಲ್ಸ್-ಬೆಲ್ಜಿಯಂ ಹಣಾಹಣಿ

Update: 2016-07-01 00:16 IST

ಲಿಲ್ಲೆ, ಜೂ.30: ಯುರೋ ಕಪ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ ವೇಲ್ಸ್ ಮತ್ತು ಬೆಲ್ಜಿಯಂ ತಂಡಗಳು ಹಣಾಹಣಿ ನಡೆಸಲಿವೆ.
 ವೇಲ್ಸ್ ತಂಡವನ್ನು ಗೆರತ್ ಬೇಲ್ ಮತ್ತು ಬೆಲ್ಜಿಯಂ ತಂಡವನ್ನು ಸ್ಟಾರ್ ಆಟಗಾರ ಎಡನ್ ಹಝಾರ್ಡ್ ಮುನ್ನಡೆಸುತ್ತಿದ್ದಾರೆ.
ಬೆಲ್ಜಿಯಂ ಫಿಫಾ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನದಲ್ಲಿದೆ. ತಂಡ ಬಲಿಷ್ಠವಾಗಿದ್ದರೂ 1986ರ ವಿಶ್ವಕಪ್ ಬಳಿಕ ಇದೀಗ ಮೊದಲ ಬಾರಿ ಮೇಜರ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ವೇಲ್ಸ್ ತಂಡ 58 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ಸಾಧನೆ ಮಾಡಿದೆ. ಇದು ವೇಲ್ಸ್ ಪಾಲಿಗೆ ಸ್ಮರಣೀಯ ದೊಡ್ಡ ಪಂದ್ಯವಾಗಿದೆ ಎಂದು ಬಾಲೆ ಅಭಿಪ್ರಾಯಪಟ್ಟಿದ್ದಾರೆ. ಅವರು ಟೂರ್ನಮೆಂಟ್‌ನಲ್ಲಿ ಗರಿಷ್ಠ ಗೋಲು(3 ಗೋಲು) ದಾಖಲಿಸಿದ ಇಬ್ಬರು ಆಟಗಾರರಲ್ಲಿ ಒಬ್ಬರು.
 1958ರಲ್ಲಿ ವೇಲ್ಸ್ ತಂಡ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿತ್ತು. ಆ ಬಳಿಕ ತಂಡಕ್ಕೆ ಇದೇ ಮೊದಲ ಬಾರಿ ಮೇಜರ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ತಲುಪಲು ಸಾಧ್ಯವಾಗಿದೆ. ನಾವು ಸೆಮಿಫೈನಲ್ ತಲುಪುವ ಪ್ರಯತ್ನ ನಡೆಸಲಿದ್ದೇವೆ ಎಂದು ಗೆರತ್ ಬೇಲ್ ತಿಳಿಸಿದ್ದಾರೆ.
ಗ್ರೂಪ್ ‘ಬಿ’ಯಲ್ಲಿ ರಷ್ಯಾ ವಿರುದ್ಧ 3-0 ಗೋಲು ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದ ವೇಲ್ಸ್ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.
  ಇಟಲಿ ವಿರುದ್ಧ ಮೊದಲ ಪಂದ್ಯದಲ್ಲಿ 2-0 ಅಂತರದಲ್ಲಿ ಗೆಲುವಿನೊಂದಿಗೆ ೆ ಬೆಲ್ಜಿಯಂ ಅಭಿಯಾನ ಆರಂಭಿಸಿತ್ತು.ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ತಂಡ ಹಂಗೇರಿಯ ವಿರುದ್ಧ 4-0 ಅಂತರದಲ್ಲಿ ಭರ್ಜರಿ ಗೆಲುವಿನೊಂದಿಗೆ ಬೆಲ್ಜಿಯಂ ಕ್ವಾರ್ಟರ್ ಫೈನಲ್ ತಲುಪಿತ್ತು. ವೇಲ್ಸ್ ತಂಡ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿತ್ತು. ಬೆಲ್ಜಿಯಂ ತಂಡ 2014ರ ವಿಶ್ವಕಪ್ ಬಳಿಕ ತಂಡದ ಸಾಮರ್ಥ್ಯದಲ್ಲಿ ಸುಧಾರಣೆಯಾಗಿದೆ.ಅದು ಸೆಮಿಫೈನಲ್ ತಲುಪುವ ಹಮ್ಮಸ್ಸಿನಲ್ಲಿದೆ. ಬೆಲ್ಜಿಯಂ ಡಿಫೆಂಡರ್ ಟಾಬಿ ಅಲ್ಡೆರ್‌ವೇಯರೆಲ್ಡ್ ‘‘ ನಾವು ಖಂಡಿತವಾಗಿಯೂಗೆಲುವು ಸಾಧಿಸುತ್ತೇವೆ’’ಎಂದು ಗೆರತ್ ಬೇಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
 ‘‘ ಟೂರ್ನಮೆಂಟ್‌ನ ಆರಂಭದಲ್ಲಿ ಪಂದ್ಯವನ್ನು ಗೆಲ್ಲುವುದು ಪ್ರಮುಖವಾಗಿತ್ತು. ಸೆಮಿಫೈನಲ್ ತಲುಪುವುದು ನಮ್ಮ ಈಗಿನ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
 ಬೆಲ್ಜಿಯಂ ತಂಡದಲ್ಲಿ 21ರ ಹರೆಯದ ಜೇಸನ್ ಡೇನಯೆರ್ ಅವರು ಅಮಾನತುಗೊಂಡ ಥಾಮಸ್ ವೆರ್ಮಲೆನ್ ಬದಲಿಗೆ ಆಡುವುದು ಖಚಿತವಾಗಿದೆ.
ಅಟ್ಲಾಟಿಕ್ ಮ್ಯಾಡ್ರಿಡ್‌ನ ವಿಂಗರ ಯಾನ್‌ನಿಕ್ ಫೆರೆರಾ ಕರ್ರಾಸ್ಕೊ ಅವರು ಡಿರಿಸ್ ಮೆರ್ಟೆನ್ಸ್ ಬದಲಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
     
ವೇಲ್ಸ್ ತಂಡದ ನಾಯಕ ಅಸ್ಲೇ ವಿಲಿಯಮ್ಸ್ ಅವರು ನಾರ್ಥನ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವಾಗ ಗಾಯಗೊಂಡಿದ್ದರು. ತಂಡದ ಸಹ ಆಟಗಾರ ಜೋನಾಥನ್ ವಿಲಿಯಮ್ಸ್‌ಗೆ ಡಿಕ್ಕಿ ಹೊಡೆದು ಗಾಯ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News