ಪೊಲೀಸ್ ಕೆಡೆಟ್‌ಗಳ ಮೇಲೆ ಆತ್ಮಹತ್ಯಾ ದಾಳಿ: 40 ಸಾವು
Update: 2016-07-01 00:33 IST
ಕಾಬೂಲ್, ಜೂ. 30: ಕಾಬೂಲ್‌ನ ಪಶ್ಚಿಮದ ಹೊರವಲಯದಲ್ಲಿ ಇತ್ತೀಚೆಗೆ ಪದವಿ ಪಡೆದ ಪೊಲೀಸ್ ಕೆಡೆಟ್‌ಗಳನ್ನು ಸಾಗಿಸುತ್ತಿದ್ದ ಬಸ್‌ಗಳ ಮೇಲೆ ಗುರುವಾರ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ ಸುಮಾರು 40 ಪೊಲೀಸರು ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ನೆರೆಯ ವಾರ್ದಕ್ ಪ್ರಾಂತದಿಂದ ಅಫ್ಘಾನ್ ರಾಜಧಾನಿಗೆ ಬರುತ್ತಿದ್ದ ಮೂರು ಬಸ್‌ಗಳ ಮೇಲೆ ದಾಳಿ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.