ಇಸ್ತಾಂಬುಲ್ ದಾಳಿ 13 ಶಂಕಿತರ ಸೆರೆ
Update: 2016-07-01 00:34 IST
ಅಂಕಾರ, ಜೂ. 30: ಇಸ್ತಾಂಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಗಳಿಗೆ ಸಂಬಂಧಿಸಿ ಟರ್ಕಿ ಪೊಲೀಸರು ಇಂದು 13 ಮಂದಿಯನ್ನು ಬಂಧಿಸಿದ್ದಾರೆ.
‘‘ಇಂದು ಮುಂಜಾನೆ, ಪೊಲೀಸರು 16 ಸ್ಥಳಗಳಲ್ಲಿ ದಾಳಿ ನಡೆಸಿ 13 ಶಂಕಿತ ಐಸಿಸ್ ಭಯೋತ್ಪಾದಕರನ್ನು ಬಂಧಿಸಿದರು. ಅವರ ಪೈಕಿ ಮೂವರು ವಿದೇಶೀಯರು’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಿದೇಶಿ ರಾಷ್ಟ್ರೀಯರ ಗುರುತನ್ನು ಅವರು ಬಹಿರಂಗಪಡಿಸಲಿಲ್ಲ. ತ್ಮಹತ್ಯಾ ಬಾಂಬ್‌ಧಾರಿಗಳ ಪೈಕಿ ಓರ್ವ ರಶ್ಯ ಮೂಲದ ಚೆಚನ್ ಪ್ರಜೆ ಎಂಬುದಾಗಿ ಟರ್ಕಿಯ ‘ಹುರಿಯತ್’ ಪತ್ರಿಕೆ ಹೇಳಿದೆ.