×
Ad

ಆರ್.ಕೆ. ಚೌಧುರಿ ರಾಜೀನಾಮೆ

Update: 2016-07-01 00:35 IST

ಲಕ್ನೋ,ಜೂ.30: ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಬಿಎಸ್‌ಪಿಗೆ ಗುರುವಾರ ಭಾರೀ ದೊಡ್ಡ ಆಘಾತವಾಗಿದ್ದು, ಪಕ್ಷದ ಅಧಿನಾಯಕಿ ಮಾಯಾವತಿಯ ನಿಷ್ಠಾವಂತ ಬೆಂಬಲಿಗರೆನಿಸಿದ್ದ, ಮಾಜಿ ಸಚಿವ ಪಿ.ಕೆ.ಚೌಧುರಿ ಪಕ್ಷವನ್ನು ತ್ಯಜಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಬಿಎಸ್ಪಿಯು ಪಕ್ಷದ ಟಿಕೆಟ್‌ಗಳನ್ನು ಹರಾಜಿಗಿಟ್ಟಿದೆಯೆಂದವರು ಆಪಾದಿಸಿದ್ದಾರೆ.
ಲಕ್ನೋದಲ್ಲಿ ಇಂದು ನಡೆದ ಸುದ್ದಿ ಗೋಷ್ಠಿಯೊಂದರಲ್ಲಿ ಬಿಎಸ್ಪಿಗೆ ತನ್ನ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ ಅವರು, ಚುನಾವಣೆಯ ಸಮಯದಲ್ಲಿ ಗರಿಷ್ಠ ಮೊತ್ತವನ್ನು ಪಾವತಿಸುವ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್‌ಗಳನ್ನು ಮಾರಲಾಗುತ್ತಿದೆಯೆಂದು ದೂರಿದರು.
 
""Pಮಾಯಾವತಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಚೌಧುರಿ, ಕಾನ್ಶಿರಾಮ್ ನಿಧನದ ಬಳಿಕ ಆಕೆಯ ಕಾರ್ಯಶೈಲಿಯಲ್ಲಿ ಭಾರೀ ಬದಲಾವಣೆಯಾಗಿದೆಯೆಂದರು. ಪಕ್ಷಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದ್ದು, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲವೆಂದವರು ಆಪಾದಿಸಿದರು.ಾನ್ಶಿರಾಮ್ ಅವರು ಒಂದೇ ಬ್ಯಾನರ್‌ನಡಿ ವಿವಿಧ ಜಾತಿಗಳ ಜನರನ್ನು ಒಗ್ಗೂಡಿಸಿದರು. . ಅವರ ಸಂಘಟಿತ ಪ್ರಯತ್ನಗಳ ಪರಿಣಾಮವಾಗಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಬ್ಯಾಂಕೊಂದು ಸೃಷ್ಟಿಯಾಗಿತ್ತು. ಕಾನ್ಶಿರಾಮ್ ನಿಧನದ ಬಳಿಕ ಮಾಯಾವತಿ ಪಕ್ಷದ ಟಿಕೆಟ್‌ಗಳನ್ನು ಮಾರಾಟ ಮಾಡತೊಡಗಿದರು ಹಾಗೂ ಬಿಎಸ್ಪಿಯು ಟಿಕೆಟ್ ಮಾರಾಟಕ್ಕೆ ಒಂದು ಮಾರುಕಟ್ಟೆಯಾಗಿ ಬಿಟ್ಟಿತೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್ಪಿಯು, ತನ್ನ ಸಿದ್ಧಾಂತವಾದಿಗಳ ವಿಚಾರಧಾರೆಗಳಿಂದ ದೂರ ಸರಿದಿದ್ದು, ಬಂಡವಾಳಶಾಹಿತ್ವವು ಮುಂಚೂಣಿಗೆ ಬಂದಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News