×
Ad

ಯೂರೋಪ್ ಲೀಗ್ ನಲ್ಲಿ ಆಡಿದ ಪ್ರಪ್ರಥಮ ಭಾರತೀಯ ಫುಟ್ಬಾಲ್ ಆಟಗಾರ ಗುರುಪ್ರೀತ್ ಸಿಂಗ್

Update: 2016-07-01 08:58 IST

ಭಾರತ ಫುಟ್ಬಾಲ್ ತಂಡದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ಇಡೀ ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ನಾರ್ವೆಯ ಸ್ಟೆಬಾಕ್ ಫುಟ್ಬಾಲ್ ಕ್ಲಬ್ ಪರ ಆಡುವ ಮೂಲಕ ಯೂರೋಪ್ ಲೀಗ್ ನಲ್ಲಿ ಆಡಿದ ಪ್ರಪ್ರಥಮ ಭಾರತೀಯ ಫುಟ್ಬಾಲ್ ಆಟಗಾರ ಗುರುಪ್ರೀತ್ ಸಿಂಗ್ ಪಾತ್ರರಾಗಿದ್ದಾರೆ.

ಯುರೋಪ ಲೀಗ್ ನ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಗುರುವಾರ  ಕೊನ್ನಾಹ್ ಕ್ವೇ ಫುಟ್ಬಾಲ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಯೂರೋಪಿಯನ್ ಫುಟ್ಬಾಲ್ ಗೆ ಪದಾರ್ಪಣೆ ಮಾಡಿದರು.

ಆದರೆ ಪಂದ್ಯದ 30ನೇ ನಿಮಿಷದಲ್ಲಿ ಅವರ ಕೈಗೆ ಗಾಯವಾಯಿತು. ಆ ಬಳಿಕ ಐವರಿಕೋಸ್ಟ್ ಗೋಲ್ಕೀಪರ್ ಸೆಯೊಬಾ ಮಾಂಡೆ ಬದಲಿ ಆಟಗಾರರಾಗಿ ಕಣಕ್ಕೆ ಇಳಿದರು.

ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯ ಕೊನೆಹ್ ಕ್ವೇನಲ್ಲಿ ನಡೆಯಿತು. ಆದರೆ ನಿಗದಿತ ಅವಧಿಯಲ್ಲಿ ಯಾವ ತಂಡ ಕೂಡಾ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ಪಂದ್ಯವನ್ನು ಸ್ಟೆಬ್ಯಾಕ್ ನ ತವರು ನೆಲದಲ್ಲಿ ಆಡಲು ನಿರ್ಧರಿಸಲಾಗಿದೆ.

ಇದಕ್ಕೂ ಮುನ್ನ ಸಮಧೂ ಪೂರ್ವ ಬಂಗಾಳದ ಇಂಡಿಯನ್ ಜೈಂಟ್ಸ್ ಪರ ಆಡುತ್ತಿದ್ದರು. ಕಳೆದ ತಿಂಗಳು ಯೂರೋಪಿಯನ್ ನ ಪ್ರಿಮಿಯರ್ ಕ್ಲಬ್ ಪಂದ್ಯಗಳಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ನಾರ್ವೆಯನ್ ಟಿಪಿಲಿಗಾನ್ (ನಾರ್ವೆ ರಾಷ್ಟ್ರೀಯ ಲೀಗ್)ನಲ್ಲಿ ಸಂಧು ಈ ಆಡಿದ್ದರು. ಭಾರತದ ಈ ಚಾಣಾಕ್ಷ ಗೋಲ್ಕೀಪರ್ 2014ರಲ್ಲೇ ನಾರ್ವೆಗೆ ಹೋಗಿದ್ದರೂ, 2015ರ ಜನವರಿಯಲ್ಲಿ ಫಾಲೊ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಇದೀಗ ಅವರ ಅದ್ಭುತ ಕೌಶಲ ಬೆಳಕಿಗೆ ಬಂದಿದ್ದು, ಅವರಿಗೆ ಮೊದಲ ಬಾರಿಗೆ ತಂಡದಲ್ಲಿ ಆಡುವ ಅವಕಾಶ ದೊರಕಿದೆ. ಕಳೆದ ಸಾಲಿನಲ್ಲಿ ಸ್ಟೆಬಾಕ್ ಕ್ಲಬ್ ಮೂರನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ವಲಯ ಬದಲಾವಣೆಯಾಗಿರುವುದರಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News